ಸೋಮವಾರ, ಸೆಪ್ಟೆಂಬರ್ 20, 2021
28 °C

ಬಳ್ಳಾರಿ: ಸರ್ಕಾರಿ ಕಾಲೇಜಿನಲ್ಲಿ‌ ಬಿಎಸ್ಸಿ, ಎಂ.ಕಾಂ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ನಗರದ ಗಾಲಿ ರುಕ್ಮಿಣಮ್ಮ ಚೆಂಗಾರೆಡ್ಡಿ ಸ್ಮಾರಕ ಸರ್ಕಾರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಪ್ರಸಕ್ತ ವರ್ಷದಿಂದ ಬಿಎಸ್ಸಿ ಮತ್ತು ಎಂ.ಕಾಂ ಕೋರ್ಸ್ ಗಳನ್ನು ಆರಂಭಿಸಲಾಗುವುದು ಎಂದು ಪ್ರಾಂಶುಪಾಲ ಪ್ರೊ.ಪಿ.ರಾಧಾಕೃಷ್ಣ ತಿಳಿಸಿದರು.

ಕಾಲೇಜಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಸಿಎಂ, ಪಿಎಂಸಿಎಸ್, ಸಿಬಿಝಡ್, ಇಎಂಎಸ್ ಟಿ ಸಂಯೋಜನೆಗಳಿವೆ ಎಂದು ಮಾಹಿತಿ ನೀಡಿದರು.

ಹೈ-ಕ ಅನುದಾನದಲ್ಲಿ 13 ತರಗತಿ‌ ಕೊಠಡಿ, ರಾಜ್ಯ‌ಸರ್ಕಾರದ ಅನುದಾನದಲ್ಲಿ ಕಾಂಪೌಂಡ್, ಕ್ಯಾಂಟೀನ್ ಹಾಗೂ ಮಲ್ಟಿ ಜಿಮ್ ನಿರ್ಮಿಸಲಾಗುವುದು ಎಂದರು.

ಕಾಲೇಜಿನಲ್ಲಿ ವಿಜ್ಞಾನ ಕೋರ್ಸ್ ಆರಂಭಿಸುತ್ತಿರುವುದರಿಂದ ಕಾಲೇಜು ಹೆಸರನ್ನು ಸರ್ಕಾರಿ ಪ್ರಥಮ‌ದರ್ಜೆ ಕಾಲೇಜು, ಬಳ್ಳಾರಿ ನಗರ ಎಂದು ‌ಬದಲಾಯಿಸಲು ಕೋರಿ‌ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು