ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಬಂದವರಿಗೆ ಸಿಎಂ ಅನ್ಯಾಯ ಮಾಡಿಲ್ಲ: ಎಸ್‌.ಟಿ.ಸೋಮಶೇಖರ್

Last Updated 20 ನವೆಂಬರ್ 2020, 3:08 IST
ಅಕ್ಷರ ಗಾತ್ರ

ಹೊಸಪೇಟೆ: ಬಿಜೆಪಿಗೆ ಬಂದವರಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಅನ್ಯಾಯ ಮಾಡಿಲ್ಲ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್ ಹೇಳಿದರು.

ಅಖಿಲ ಭಾರತ 67ನೇ ಸಹಕಾರ ಸಪ್ತಾಪ ಕಾರ್ಯಕ್ರಮ ಆರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ರಾಜೀನಾಮೆ ನೀಡಿದ 17 ಶಾಸಕರಿಗೆ ಬಿಜೆಪಿ ಬಿ ಫಾರಂ ನೀಡಿದೆ. ಚುನಾವಣೆಯಲ್ಲೂ ಗೆಲ್ಲಿಸಿದ್ದಾರೆ. ಸೋತವರಿಗೆ ಎಂಎಲ್‌ಸಿ ಮಾಡಿದ್ದಾರೆ. ಗೆದ್ದವರಿಗೆ ಮಂತ್ರಿ ಮಾಡಿದ್ದಾರೆ. ಕ್ಯಾಬಿನೆಟ್ ಸೇರಿಸಿಕೊಳ್ಳುವುದು ಯಡಿಯೂರಪ್ಪ ಅವರಿಗೆ ಪರಮಾಧಿಕಾರ ಇದೆ. ಅವರು ಕೊಟ್ಟ ಮಾತಿನಂತೆ ನಡೆದು ಕೊಂಡಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ನಾವೆಲ್ಲಾ ಈಗಲೂ ಒಂದೇ ಟೀಮ್ ಎರಡು ಟೀಮ್ ಆಗಿರುವ ಪ್ರಶ್ನೆಯೇ ಇಲ್ಲ. ನಾವೆಲ್ಲಾ ಬಿಜೆಪಿ ಶಾಸಕರೇ ನಾವೆಲ್ಲಾ ಒಂದೇ, ಅವರು ಇವರು ಅನ್ನೋದು ಏನೂ ಇಲ್ಲ. ಮತ್ತೆ ಶಾಸಕರನ್ನ ಕರೆತರುವ ಅವಶ್ಯಕತೆ ಇಲ್ಲ ಎಂದರು.

ಕೃಷಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ‘ಸಿಎಂ ಮನೆಗೆ ಭೇಟಿ ನೀಡಿದವರೆಲ್ಲಾ ಮಂತ್ರಿಗಾಗಿ ಅಲ್ಲ. ಬಿಜೆಪಿ ಪಕ್ಷದಲ್ಲಿ ಮೂಲ ವಲಸಿಗರು ಅನ್ನೋದು ಏನಿಲ್ಲ. ಬಿಜೆಪಿ ಸೇರಿದ 17 ಶಾಸಕರನ್ನ ಪಕ್ಷ ಗೌರವದಿಂದ ನಡೆಸಿಕೊಳ್ಳುತ್ತಿದೆ.‌ ನಾವೆಲ್ಲಾ ಅಣ್ಣ- ತಮ್ಮಂದಿರು ತರಹ ಇದ್ದೇವೆ. ಯಾರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವ ಬಗ್ಗೆ ಸಿಎಂ ನಿರ್ಧಾರ ಮಾಡುತ್ತಾರೆ’ ಎಂದರು.

ನಾಡಗೀತೆಯೊಂದಿಗೆ ಅಖಿಲ ಭಾರತ ಸಹಕಾರ ಸಪ್ತಾಹ ಆರಂಭ
ಹೊಸಪೇಟೆ:
ಇಲ್ಲಿನ ಮುನ್ಸಿಪಲ್ ಮೈದಾನದಲ್ಲಿ ಹಮ್ಮಿಕೊಂಡಿರುವ ಅಖಿಲ ಭಾರತ 67ನೇ ಸಹಕಾರ ಸಪ್ತಾಹ ಆರಂಭವಾಗಿದೆ.

ಅರಣ್ಯ ಸಚಿವ ಆನಂದ್ ಸಿಂಗ್, ಕೃಷಿ ಸಚಿವ ಬಿ.ಸಿ. ಪಾಟೀಲ್, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT