ಬಳ್ಳಾರಿ | ಜಿಂದಾಲ್ನ 27 ಮಂದಿಗೆ ಸೋಂಕು: 128ಕ್ಕೆ ಏರಿದ ಸೋಂಕಿತರ ಸಂಖ್ಯೆ

ಬಳ್ಳಾರಿ: ಜಿಲ್ಲೆಯ ಜಿಂದಾಲ್ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿಢೀರನೆ ಹೆಚ್ಚಾಗಿದೆ. ಗುರುವಾರ ದೃಢಪಟ್ಟ 34 ಪ್ರಕರಣಗಳಲ್ಲಿ ಜಿಂದಾಲ್ನವರು 27 ಮಂದಿ ಇದ್ದಾರೆ. ಉಳಿದ ಐವರು ಮಹಾರಾಷ್ಟ್ರದಿಂದ ಬಳ್ಳಾರಿಗೆ ವಾಪಸಾಗಿದ್ದರು.
ಸದ್ಯ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 128ಕ್ಕೆ ಏರಿದೆ. ಬುಧವಾರ ಈ ಸಂಖ್ಯೆ 94ಕ್ಕೆ ನಿಂತಿತ್ತು.
ಅಸಮಾಧಾನ: ಜಿಂದಾಲ್ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಜಿಲ್ಲೆಯಲ್ಲಿ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಲಾಕ್ಡೌನ್ ಆರಂಭದಿಂದಲೇ ಜಿಂದಾಲ್ನಲ್ಲಿ ಅದಿರು ಉತ್ಪಾದನೆಗೆ ತಡೆವೊಡ್ಡಬೇಕು ಎಂಬ ಜನಾಗ್ರಹವನ್ನು ಮೂಲೆಗೊತ್ತಿ ಉತ್ಪಾದನೆಗೆ ಅವಕಾಶ ನೀಡಿದ್ದೇ ಇಂದಿನ ಪರಿಸ್ಥಿತಿಗೆ ಕಾರಣ ಎಂಬ ಆಕ್ರೋಶವೂ ವಾಟ್ಸ್ಯಾಪ್ ಗುಂಪುಗಳಲ್ಲಿ ಹರಿದಾಡಿದೆ.
ಅದಿರು ಉತ್ಪಾದನೆಗೆ ಅತಿ ಕಡಿಮೆ ಸಂಖ್ಯೆಯ ಸಿಬ್ಬಂದಿ ಬಳಸಲಾಗುವುದು ಎಂದು ಜಿಂದಾಲ್ ಹೇಳಿತ್ತು. ಆ ನಂತರವೂ ಅಂತರ ಕಾಪಾಡಿಕೊಳ್ಳದೇ ಜಿಂದಾಲ್ ಬಸ್ಗಳಲ್ಲಿ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಬಗ್ಗೆಯೂ ಆಕ್ಷೇಪಗಳು ವ್ಯಕ್ತವಾಗಿದ್ದವು. ಸ್ವತಃ ಸಿಬ್ಬಂದಿಯೇ ಭೀತಿ ವ್ಯಕ್ತಪಡಿಸಿದ್ದರೂ ಜಿಂದಾಲ್ನಲ್ಲಿ ಚಟುವಟಿಕೆಗಳು ನಿಂತಿರಲಿಲ್ಲ.
ಜಿಂದಾಲ್ನಲ್ಲಿ 30 ಸಾವಿರ ಕಾರ್ಮಿಕರಿದ್ದಾರೆ. ಈಗ ಅವರಲ್ಲಿ, ಅವರ ಕುಟುಂಬಗಳ ಸದಸ್ಯರಲ್ಲಿ ಮತ್ತು ಅವರು ವಾಸಿಸುವ ಪ್ರದೇಶಗಳ ಸುತ್ತಮುತ್ತಲ ಜನರಲ್ಲಿ ಆತಂಕ ಹೆಚ್ಚಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.