ಗುರುವಾರ , ಮೇ 6, 2021
23 °C

ಕೊರೊನಾ ವೈರಸ್‌ ಭೀತಿಯಿಂದ ಮನನೊಂದ ವ್ಯಕ್ತಿ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಕೊಟ್ಟೂರು: ಕೊರೊನಾ ಸೊಂಕು ಬಂದಿದೆ ಎಂದು ಮನನೊಂದು 62 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ‌ ಅಲೂಬೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಕಳೆದ ಒಂದು ವಾರಗಳಿಂದ ಮೃತ ವ್ಯಕ್ತಿ ತನಗೆ ಕೊರೊನಾ ಇದೆ ಎಂದು ಭಾವಿಸಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಾನೆ. ಖಿನ್ನತೆಯಲ್ಲಿ ಎಲ್ಲೆಲ್ಲೂ ಸುತ್ತಿದ್ದು, ಮನೆಯಲ್ಲಿಯೂ ಮಕ್ಕಳು, ಮೊಮ್ಮಕ್ಕಳ ಬಳಿ ದೂರದಿಂದ ಮಾತನಾಡುತ್ತಿರುವುದಾಗಿ ತಿಳಿದು ಬಂದಿದೆ.
ಶನಿವಾರ ಬೆಳಗ್ಗೆ ಊರು ತೊರೆದಿದ್ದ ಅವರು ಇಂದು ಜಮೀನಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೃತ ವ್ಯಕ್ತಿಗೆ ಯಾವುದೇ ಸೊಂಕು ಇರಲಿಲ್ಲ. ಮಾನಸಿಕವಾಗಿ ಖಿನ್ನತೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಹಶೀಲ್ದಾರ್ ಜಿ ಅನಿಲ್ ಕುಮಾರ್ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು