ಗುರುವಾರ , ಜೂನ್ 24, 2021
29 °C

ಗುಡುಗು ಸಹಿತ ಬಿರುಸಿನ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ನಗರ ಸೇರಿದಂತೆ ಹಲವು ಭಾಗಗಳಲ್ಲಿ ಮಂಗಳವಾರ ರಾತ್ರಿ ಗುಡುಗು ಸಹಿತ ಬಿರುಸಿನ ಮಳೆಯಾಗಿದೆ.

ರಾತ್ರಿ 9.15ರ ಸುಮಾರಿಗೆ ಆರಂಭವಾದ ಮಳೆ ಸತತವಾಗಿ ಒಂದು ಗಂಟೆಗೂ ಅಧಿಕ ಸಮಯ ಸುರಿಯಿತು. ಬಿರುಗಾಳಿಯೊಂದಿಗೆ ಆರಂಭಗೊಂಡ ಮಳೆ, ಬಳಿಕ ಗುಡುಗು, ಮಿಂಚಿನೊಂದಿಗೆ ಬಿರುಸಾಗಿ ಸುರಿಯಿತು. ಜೋರು ಮಳೆಯಿಂದ ನಗರದ ರಾಮ ಟಾಕೀಸ್‌, ಮೇನ್‌ ಬಜಾರ್‌, ಪುಣ್ಯಮೂರ್ತಿ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ನೀರು ಸಂಗ್ರಹಗೊಂಡಿತು.

ಸೋಮವಾರ ಸಂಜೆ ಸಹ ಮಳೆ ಸುರಿದಿತ್ತು. ಎರಡನೇ ದಿನವೂ ಮಳೆ ಸುರಿದ ಕಾರಣ ತಾಪಮಾನದಲ್ಲಿ ಭಾರಿ ಇಳಿಕೆಯಾಗಿದ್ದು, ವಾತಾವರಣ ತಂಪಾಗಿದೆ. ತಾಲ್ಲೂಕಿನ ಹಂಪಿ, ಕಮಲಾಪುರ, ಬುಕ್ಕಸಾಗರ, ನಲ್ಲಾಪುರ, ಸೀತಾರಾಮ ತಾಂಡ, ಚಿನ್ನಾಪುರ, ಇಂಗಳಗಿ ಸೇರಿದಂತೆ ಹಲವು ಕಡೆಗಳಲ್ಲಿ ಮಳೆಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.