ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರ ಕಲೆ: ಗೋಡೆಗೆ ಜೀವ ತುಂಬುವ ರಮ್ಯಶ್ರೀ

Last Updated 7 ಮಾರ್ಚ್ 2021, 13:17 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ಕೈಗೆ ಬ್ರಷ್‌, ಪೆನ್ಸಿಲ್‌ ಸಿಕ್ಕರೆ ಸಾಕು ಸುಪುರ ಗೋಡೆಗೆ ಜೀವ ತುಂಬಿ, ಅದಕ್ಕೊಂದು ಹೊಸ ರೂಪ ಕೊಡುವ ಚಾಕಚಾಕ್ಯತೆ ಹೊಂದಿದ್ದಾರೆ ಪಟ್ಟಣದ ಎಂ.ಎಂ. ರಮ್ಯಶ್ರೀ.

ಓದಿದ್ದು ಬಿ.ಎಸ್ಸಿ. ಆದರೆ, ಚಿತ್ರಕಲೆಯಲ್ಲಿ ವಿಶೇಷ ಆಸಕ್ತಿ. ಯಾರ ಮಾರ್ಗದರ್ಶನ ಇಲ್ಲದೆ ಸುಂದರವಾದ ಚಿತ್ರಗಳನ್ನು ಬಿಡಿಸುವ ಕಲೆ ರಮ್ಯಶ್ರೀ ಮೈಗೂಡಿಸಿಕೊಂಡಿದ್ದಾರೆ.

ಶಾಲೆಯಲ್ಲಿ ಓದುತ್ತಿರುವಾಗಲೇ ಚಿತ್ರ ಬಿಡಿಸುವ ಹವ್ಯಾಸ ಮೈಗೂಡಿಸಿಕೊಂಡ ರಮ್ಯಶ್ರೀ ಕಾಲೇಜು ಮೆಟ್ಟಿಲು ಹತ್ತಿದರೂ ಬಿಟ್ಟಿಲ್ಲ. ಅಂದಹಾಗೆ, ಓದಿನಲ್ಲೂ ಹಿಂದೆ ಬಿದ್ದಿಲ್ಲ. ಬಿಎಸ್ಸಿ ಪದವಿಯಲ್ಲಿ ಶೇ 72ರಷ್ಟು ಅಂಕ ಗಳಿಸಿದ್ದಾರೆ.

ಮದುವೆ ಹೆಣ್ಣಿನ ಮೊಗ್ಗಂ, ಆರಿ ವರ್ಕ್ಸ್‌, ಡೂಡ್ಲಿಂಗ್ ಇವರಿಗೆ ಅಚ್ಚುಮೆಚ್ಚು. ಭರತನಾಟ್ಯ, ತಾಂಡವ ನೃತ್ಯ, ಸಿಸ್ಟರ್ ನಿವೇದಿತಾ, ಆಂಜನೇಯ, ಶಿವ, ರಾಮ, ಶಾರದಾಂಬೆ, ನಾಟ್ಯ ಮಾಡುವ ರಾಧಾಕೃಷ್ಣ, ಮದರ್ ಥೆರೆಸಾ, ದುರ್ಗಾಮಾತೆ ಮತ್ತು ಪಕ್ಷಿಗಳ ಚಿತ್ರಗಳನ್ನು ಸೊಗಸಾಗಿ ಬಿಡಿಸುತ್ತಾರೆ. ಇತ್ತೀಚೆಗೆ ಕೇರಳದಲ್ಲಿ ಮದ್ದು ಸಿಡಿಸಿ ಆನೆ ಸಾಯಿಸಿದ ಚಿತ್ರ ಮಾನವೀಯ ನೆಲೆಗಟ್ಟಿನ ಚಿತ್ರ ಎಂತಹವರ ಮನ ಕಲಕುವಂತಹದ್ದು. ಇದು ಅವರ ಸೂಕ್ಷ್ಮ ಸಂವೇದನೆಗೆ ಸಾಕ್ಷಿ.

ಕಪ್ಪು ಪೆನ್ಸಿಲ್‍ಗಳಿಂದ 200ಕ್ಕೂ ಹೆಚ್ಚು ವಿವಿಧ ರೂಪದ ಚಿತ್ರಗಳನ್ನು ಕ್ಯಾನ್ವಾಸ್ ಹಾಗೂ ಪೇಪರ್‌ನಲ್ಲಿ ಬಿಡಿಸಿ ಮನೆಯಲ್ಲಿ ಜತನ ಮಾಡಿಟ್ಟಿದ್ದಾರೆ.

‘ಚಿತ್ರಕಲೆ ಆದಾಯ ಗಳಿಸಲು ಕಲಿತಿಲ್ಲ, ಇದೊಂದು ಹವ್ಯಾಸವಷ್ಟೇ’ ಎನ್ನುತ್ತಾರೆ ರಮ್ಯಶ್ರೀ. ಹಲವು ಆನ್‍ಲೈನ್ ಚಿತ್ರಕಲೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇನ್‍ಸ್ಟಾಗ್ರಾಂ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಚಿತ್ರಕಲೆಯಲ್ಲಿ ಇನ್ನೂ ಹೆಚ್ಚಿನ ನೈಪುಣ್ಯತೆ ಪಡೆಯಲು ತರಬೇತಿ ಪಡೆಯುವ ಇಚ್ಛೆ ಅವರಿಗೆ ಇದೆಯಾದರೂ ಮನೆಯ ಆರ್ಥಿಕ ಪರಿಸ್ಥಿತಿ ಅವರನ್ನು ಹಿಂಜರೆಯುವಂತೆ ಮಾಡಿದೆ. ಇವರ ತಂದೆ ವೀರೇಶ್ ಅವರು ಪಟ್ಟಣದ ಗ್ಯಾರೇಜ್ ಒಂದರಲ್ಲಿ ಕೆಲಸ ಮಾಡುತ್ತಾರೆ. ಮಗಳ ಆಸಕ್ತಿಗೆ ಬೆಂಬಲಿಸುವುದಾಗಿ ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT