ಶನಿವಾರ, ನವೆಂಬರ್ 28, 2020
17 °C

ರಾಷ್ಟ್ರೋತ್ಥಾನ: ಪುಸ್ತಕಗಳಿಗೆ ಶೇ 25ರಷ್ಟು ರಿಯಾಯಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ರಾಷ್ಟ್ರೋತ್ಥಾನ ಸಾಹಿತ್ಯವು ತನ್ನ ಪ್ರಕಟಣೆಯ ಎಲ್ಲ ಪುಸ್ತಕಗಳಿಗೆ ಶೇ 25 ರಷ್ಟು ರಿಯಾಯಿತಿ ಘೋಷಿಸಿದೆ.

ಈ ಕೊಡುಗೆಯು ನವೆಂಬರ್ ತಿಂಗಳು ಪೂರ್ತಿ ಇರಲಿದೆ. ದೇಶದ ಮಹಾಪುರುಷರ ಬದುಕನ್ನು ಚಿತ್ರಿಸಿರುವ 610 ‘ಭಾರತೀ ಭಾರತ’ ಪುಸ್ತಕಗಳು ಸೇರಿದಂತೆ ವ್ಯಕ್ತಿತ್ವ ವಿಕಸನ, ಆರೋಗ್ಯ, ಜೀವನ ಚರಿತ್ರೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ 850 ಪುಸ್ತಕಗಳನ್ನು ಪ್ರಕಟಿಸಲಾಗಿದೆ. ಪುಸ್ತಕಗಳನ್ನು ಅಂಚೆ ವಿಳಾಸಕ್ಕೆ ಕಳುಹಿಸುವ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಪುಸ್ತಕ ಪ್ರೇಮಿಗಳು www.sahityabooks.com ಮೂಲಕ ಅಥವಾ ರಾಷ್ಟ್ರೋತ್ಥಾನ ಪುಸ್ತಕ ಮಳಿಗೆಯ ಮೂಲಕ ಖರೀದಿಸಬಹುದು ಎಂದು ರಾಷ್ಟ್ರೋತ್ಥಾನ ಸಾಹಿತ್ಯದ ವಿಶ್ವಸ್ಥ ಕೆ.ಎಸ್. ನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಪರ್ಕಕ್ಕೆ: 080 26612730 ಅಥವಾ 9880288909

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.