ಬೆಂಗಳೂರು: ನಗರದ ಸುತ್ತಮುತ್ತಲಿನ ಪ್ರಮುಖ ಪಟ್ಟಣಗಳನ್ನು ಸಂಪರ್ಕಿಸುವ ದೇಶದ ಅತಿದೊಡ್ಡ ವೃತ್ತರೈಲು ಸಂಪರ್ಕಜಾಲವನ್ನು (ಸರ್ಕ್ಯುಲರ್ ರೈಲ್ವೆ) ನಿರ್ಮಿಸುವದಕ್ಕಾಗಿ 2,500 ಎಕರೆ ಜಮೀನು ಭೂಸ್ವಾಧೀನ ಮಾಡಲು ನಿರ್ಧರಿಸ
ಲಾಗಿದೆ. ಸ್ವಾಧೀನ ಮಾಡಿಕೊಳ್ಳುವ ಜಮೀನಿಗೆ ರೈಲ್ವೆ ಇಲಾಖೆಯೇ ಪರಿಹಾರ ನೀಡಲಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದರಾದ ಕೆ. ಸುಧಾಕರ್, ಪಿ.ಸಿ.ಮೋಹನ್, ಡಾ.ಸಿ.ಎನ್. ಮಂಜುನಾಥ್, ರಾಜ್ಯದ ಸಚಿವ ಕೆ.ಎಚ್. ಮುನಿಯಪ್ಪರ ಜೊತೆಗೆ ಹೊರ ವರ್ತುಲ ರೈಲ್ವೆ ಯೋಜನೆಯ ಪರಿಶೀಲನಾ ಸಭೆಯನ್ನು ಶನಿವಾರ ನಡೆಸಿದರು. ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಮುಂದಿನ 50 ವರ್ಷಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ವರ್ತುಲ ರೈಲ್ವೆ ಯೋಜನೆ ರೂಪಿಸಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಸಮೀಕ್ಷೆ ನಡೆಸಲಾಗಿದೆ. ಕೆಲ ನ್ಯೂನತೆ ಹಾಗೂ ಸವಾಲುಗಳಿರುವ ಬಗ್ಗೆ ಸಂಸದರು ತಿಳಿಸಿದ್ದಾರೆ. ಅವುಗಳನ್ನು ಸರಿಪಡಿಸಿ ವಿಸ್ತ್ರತ ಯೋಜನಾ ವರದಿ (ಡಿಪಿಆರ್) ರೂಪಿಸಲಾಗು
ವುದು ಎಂದು ವಿವರಿಸಿದರು.

ನಿಡವಂದ-ದೊಡ್ಬಬಳ್ಳಾಪುರ-ದೇವನಹಳ್ಳಿ-ಮಾಲೂರು, ಮಾಲೂರು-ಆನೇಕಲ್-ಹೆಜ್ಜಾಲ, ಹೆಜ್ಜಾಲ-ಸೋಲೂರು-ನಿಡವಂದ ಹೀಗೆ ಮೂರು ಹಂತದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುವುದು. ಇದು 271 ಕಿ.ಮೀ. ಉದ್ದದ ಹೊಂದಿದೆ. ವರ್ತುಲ ರೈಲು ಯೋಜನೆಗೆ ಸಾಧ್ಯವಿರುವೆಡೆ ಉಪನಗರ ರೈಲನ್ನು ಜೋಡಣೆ ಮಾಡಲಾಗುವುದು. ಜೊತೆಗೆ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಸಂಪರ್ಕಿಸುವಂತೆ ಮಾಡಲು ತೀರ್ಮಾನಿಸಲಾಗಿದೆ ಎಂದರು.

ಭೂಸ್ವಾಧೀನಕ್ಕಾಗಿ ನೈಋತ್ಯ ರೈಲ್ವೆ ಬೆಂಗಳೂರು ವಿಭಾಗೀಯ ವ್ಯವಸ್ಥಾಪಕರು, ಭೂಸ್ವಾಧೀನ ಅಧಿಕಾರಿ, ಉನ್ನತಾಧಿಕಾರಿಗಳ ಸಮಿತಿ ರಚಿಸಲಾಗುವುದು. ಕೆಐಎಡಿಬಿ, ಕೆ-ರೈಡ್, ಬಿಬಿಎಂಪಿ, ನಗರ ಹಾಗೂ ಗ್ರಾಮಾಂತರ ಜಿಲ್ಲಾಡಳಿತ ಸೇರಿ ಸಂಬಂಧಿಸಿದ ಎಲ್ಲ ಅಧಿಕಾರಿಗಳನ್ನು ಸಮಿತಿ ಒಳಗೊಳ್ಳಲಿದೆ. ಪರಿಹಾರಕ್ಕಾಗಿ ರೈಲ್ವೆ ಇಲಾಖೆ, ರಾಜ್ಯಸರ್ಕಾರ, ಸುಪ್ರೀಂ ಕೋರ್ಟ್ ಮಾರ್ಗಸೂಚಿ ಅನುಸರಿಸಲಾಗುವುದು. ಸಾಧ್ಯವಾದಷ್ಟು ಯಾರಿಗೂ ತೊಂದರೆಯಾಗದಂತೆ ಖಾಸಗಿ ಜಮೀನು ಪಡೆಯಲಾಗುವುದು ಎಂದರು.

ಮೆಗಾ ಕೋಚಿಂಗ್ ಟರ್ಮಿನಲ್

ಬೆಂಗಳೂರು ದೇವನಹಳ್ಳಿ ಹಾಗೂ ಯಲಹಂಕ ನಡುವೆ ಮೆಗಾ ಕೋಚಿಂಗ್ ಟರ್ಮಿನಲ್ ನಿರ್ಮಿಸಲು ವಿಸ್ತೃತ ಯೋಜನಾ ವರದಿ ತಯಾರಿಸಲಾಗುವುದು ಎಂದು ಸಚಿವ ವಿ. ಸೋಮಣ್ಣ ತಿಳಿಸಿದರು. ನಗರದಲ್ಲಿ ಹೊಸ ಐಟಿ ಸಿಟಿಗಳು ತಲೆ ಎತ್ತಲಿವೆ. ಮೆಟ್ರೊ ಉಪನಗರ ರೈಲು ಯೋಜನೆ ಜೊತೆಗೆ ವರ್ತುಲ ರೈಲು ಯೋಜನೆಯೂ ಅಗತ್ಯವಿದೆ ಎಂದರು.

ರಾಜ್ಯದ ಪಾಲುದಾರಿಕೆಯಿಂದಾಗಿ ಬಿಎಸ್ಆರ್ಪಿ ಕುಂಠಿತ

ರಾಜ್ಯ ಸರ್ಕಾರದ ಪಾಲುದಾರಿಕೆಯೂ ಇರುವುದರಿಂದ ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್ಆರ್ಪಿ) ಕುಂಠಿತವಾಗಿದೆ ಎಂದು ವಿ. ಸೋಮಣ್ಣ ಸಮಜಾಯಿಷಿ ನೀಡಿದರು. ಬಿಎಸ್ಆರ್ಪಿಯನ್ನು ಅನುಷ್ಠಾನಗೊಳಿಸುವ ಕೆ–ರೈಡ್ನ ವ್ಯವಸ್ಥಾಪಕ ನಿರ್ದೇಶಕರಾಗಿ ಸದ್ಯ ಐಎಎಸ್ ಅಧಿಕಾರಿ ಇದ್ದಾರೆ. ಇದರಿಂದಾಗಿ ಯಾವ ಕೆಲಸವೂ ಆಗುತ್ತಿರಲಿಲ್ಲ. ಇದೀಗ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಅವರು ಕೂಡ ಹೊಸ ವ್ವವಸ್ಥಾಪಕ ನಿರ್ದೇಶಕರ ನೇಮಕಕ್ಕೆ ಸಮ್ಮತಿಸಿದ್ದಾರೆ ಎಂದು ತಿಳಿಸಿದರು. ರೈಲ್ವೆಯಿಂದ ಒಂದು ತಿಂಗಳ ಒಳಗಾಗಿ ಹಿರಿಯ ಅನುಭವಿ ತಾಂತ್ರಿಕ ಪರಿಣತ ವ್ಯವಸ್ಥಾಪಕ ನಿರ್ದೇಶಕರು ನೇಮಕ ಆಗಲಿದ್ದಾರೆ. ಉಪನಗರ ರೈಲು ಯೋಜನೆ ಕಾಮಗಾರಿ ಚುರುಕುಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.