ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗಿಳಿಯಲಿವೆ 921 ಟಾಟಾ ಸ್ಟಾರ್ ಎಲೆಕ್ಟ್ರಿಕ್‌ ಬಸ್‌ಗಳು

Last Updated 17 ಡಿಸೆಂಬರ್ 2022, 4:59 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ರಸ್ತೆಗಳಲ್ಲಿ ಶೀಘ್ರವೇ ‘ಟಾಟಾ ಸ್ಟಾರ್‌ ಎಲೆಕ್ಟ್ರಿಕ್‌ ಬಸ್‌’ಗಳು ಸಂಚರಿಸಲಿವೆ.

ವಾಣಿಜ್ಯ ವಾಹನಗಳ ತಯಾರಿಕಾ ಸಂಸ್ಥೆ ಟಾಟಾ ಮೋಟರ್ಸ್‌ನ ಅಂಗ ಸಂಸ್ಥೆಯಾದ ಟಿಎಂಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸಲ್ಯೂಶನ್ಸ್ ಹಾಗೂ ಬಿಎಂಟಿಸಿ ಮಧ್ಯೆ ಶುಕ್ರವಾರ ಒಪ್ಪಂದವಾಗಿದೆ.

ಲೋ ಫ್ಲೋರ್‌,12 ಮೀಟರ್‌ನ 921 ಬಸ್‌ಗಳನ್ನು ಮುಂದಿನ12 ವರ್ಷಗಳವರೆಗೆ ಕಂಪನಿ ನಿರ್ವಹಣೆಮಾಡಲಿದೆ. ದೀರ್ಘಕಾಲ ಬಾಳಿಕೆಯ, ಆರಾಮದಾಯಕ ಪ್ರಯಾಣಕ್ಕಾಗಿ ಉತೃಷ್ಟ ವಿನ್ಯಾಸ, ಸುರಕ್ಷಿತ, ಪ್ರಯಾಣಿಕಸ್ನೇಹಿ ಅಂಶಗಳೊಂದಿಗೆ ಮಾಲಿನ್ಯರಹಿತ, ಪರಿಸರಸ್ನೇಹಿ ಅಭಿವೃದ್ಧಿಪಡಿಸಲಾಗಿದೆ ಎಂದು ಬಿಎಂಟಿಸಿವ್ಯವಸ್ಥಾಪಕ ನಿರ್ದೇಶಕಿ ಜಿ.ಸತ್ಯವತಿ ಮಾಹಿತಿ ನೀಡಿದರು.

ಟಿಎಂಎಲ್‌ ಸ್ಮಾರ್ಟ್ ಸಿಟಿ ಮೊಬಿಲಿಟಿ ಸಲ್ಯೂಶನ್ಸ್ ಲಿಮಿಟೆಡ್‌ ಸಿಇಒ ಅಸೀಮ್ ಕುಮಾರ್ ಮುಖೋಪಾಧ್ಯಾಯ, ‘ಬೆಂಗಳೂರು ನಗರದಲ್ಲಿ ಸಾರ್ವಜನಿಕ ಸಾರಿಗೆಯ ಆಧುನೀಕರಣಕ್ಕೆ ಸಂಸ್ಥೆ ಕೈಜೋಡಿಸಿದೆ. ಸ್ಮಾರ್ಟ್‌, ಹಸಿರು ಹಾಗೂ ಶಕ್ತಿ ಸಾಮರ್ಥ್ಯವಿರುವ ಸಮೂಹ ಸಂಚಾರ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಕಂಪನಿ ನಿರಂತರವಾಗಿ ಪ್ರಯತ್ನಿಸುತ್ತಿದೆ.ಭಾರತದ ಹಲವು ನಗರಗಳಲ್ಲಿ ಈಗಾಗಲೇ 730ಕ್ಕಿಂತ ಹೆಚ್ಚಿನ ಎಲೆಕ್ಟ್ರಿಕ್ ಬಸ್‌ಗಳನ್ನು ಸರಬರಾಜು ಮಾಡಿದ್ದೇವೆ. ಇದುವರೆಗೆ 5.5 ಕೋಟಿ ಕಿಲೋ ಮೀಟರ್‌ ಕ್ರಮಿಸಿವೆ’ ಎಂದು ವಿವರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT