ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನೇಶ್ ಅಡ್ವಾನ್ಸ್ ಹೇರ್ ಅಂಡ್ ಬ್ಯೂಟಿ ಸ್ಟುಡಿಯೋದಲ್ಲಿ ಅಭಿನಂದನ್‌ಗೆ ಅಭಿನಂದನೆ 

Last Updated 4 ಮಾರ್ಚ್ 2019, 8:15 IST
ಅಕ್ಷರ ಗಾತ್ರ

ಬೆಂಗಳೂರು: ಪಾಕಿಸ್ತಾನ ವಶದಲ್ಲಿದ್ದ ಪೈಲಟ್ ಅಭಿನಂದನ್ ಭಾರತಕ್ಕೆ ವಾಪಸ್ ಬಂದಿದ್ದು, ಅವರಿಗೆ ಅಭಿನಂದನೆ ಸಲ್ಲಿಸುವುದಕ್ಕಾಗಿ ಕೋರಮಂಗಲದ 6ನೇ ಹಂತದಲ್ಲಿರುವ ನಾನೇಶ್ ಅಡ್ವಾನ್ಸ ಹೇರ್ ಸ್ಟುಡಿಯೋದಲ್ಲಿ ವಿಶೇಷವಾಗಿ ಉಚಿತವಾಗಿ ಹೇರ್ ಕಟ್ ಆಯೋಜಿಸಲಾಗಿದೆ.

ಸಾರ್ವಜನಿಕರು ಸ್ಟುಡಿಯೋ ಎದುರು ಸರದಿಯಲ್ಲಿ ನಿಂತು ಹೆರ್ ಕಟ್ ಮಾಡಿಸಿಕೊಳ್ಳುತ್ತಿದ್ದಾರೆ. ಅಭಿನಂದನ್ ರೀತಿಯಲ್ಲಿ ಮೀಸೆ ಹಾಗೂ ಕೊದಲು ಕತ್ತರಿಸಿಕೊಳ್ಳುತ್ತಿದ್ದಾರೆ. ಕೆಲವರು ತಮ್ಮ ಮುಡಿ ಸಹ ನೀಡುತ್ತಿದ್ದಾರೆ.

ನಾನೇಶ್ ಅಡ್ವಾನ್ಸ್ ಹೇರ್ ಸ್ಟೂಡಿಯೋ ಮಾಲೀಕರಾದ ನಾನೇಶ್, 'ಶಿವರಾತ್ರಿ ಹಬ್ಬ ಇದ್ದರೂ ಜನ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಿರುವುದು ಖುಷಿ ತಂದಿದೆ. ಇಂದು ಮುಂಜಾನೆ 6 ಘಂಟೆಯಿಂದ ಪ್ರಾರಂಭವಾದ ನಮ್ಮ ಕೆಲಸಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಹಾಗೆ ನಮ್ಮ ದೇಶದ ಯೋಧನಿಗೆ ಇದು ನಮ್ಮ ಕಡೆಯಿಂದ ಪುಟ್ಟ ಗೌರವ. ಇದ್ದರಂತೆ ಎಲ್ಲ ಸಮಯದಲ್ಲೂ ನಮ್ಮ ದೇಶದ ಏಳಿಗೆಗಾಗಿ ಪ್ರತಿಯೊಬ್ಬ ಸಾರ್ವಜನಿಕರು ಕೈ ಜೋಡಿಸಬೇಕು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT