ಬೆಂಗಳೂರು: ಗ್ಯಾಸ್ ಪೈಪ್‌ಲೈನ್ ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರಿಂದ ₹20 ಸಾವಿರ ಲಂಚ ಪಡೆಯುತ್ತಿದ್ದ ಚಿಕ್ಕಜಾಲ ಸಂಚಾರ ಠಾಣೆಯ ಇನ್‌ಸ್ಪೆಕ್ಟರ್ ಹಂಸವೇಣಿ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.

ಜಕ್ಕೂರು ವಾರ್ಡ್‌ನ ಟೆಲಿಕಾಂಲೇಔಟ್‌ನಲ್ಲಿ ನೆಲದಡಿ ಪೈಪ್‌ಲೈನ್ಅಳವಡಿಕೆ ಕಾಮಗಾರಿ ನಿರ್ವಹಿಸುವ ಗುತ್ತಿಗೆಯನ್ನು ಶ್ರೀರಾಮಪುರ ನಿವಾಸಿ ಪಡೆದುಕೊಂಡಿದ್ದರು. ಆರಂಭಿಸಿದ್ದ ಕಾಮಗಾರಿ ನಿಲ್ಲಿಸಲು ತಿಳಿಸಿದ್ದ ಇನ್‌ಸ್ಪೆಕ್ಟರ್ ಹಂಸವೇಣಿ, ಕಾಮಗಾರಿ ಗುತ್ತಿಗೆ ಪಡೆದಿರುವ ಬಗ್ಗೆ ದಾಖಲೆಗಳನ್ನು ಸಲ್ಲಿಸಲು ಸೂಚಿಸಿದ್ದರು.

ದಾಖಲೆಗಳನ್ನು ಸಲ್ಲಿಸಿದಾಗ ಕಾಮಗಾರಿ ಮುಂದುವರಿಸಲು ಒಟ್ಟಾರೆ ₹50 ಸಾವಿರ ಲಂಚ ನೀಡುವಂತೆ ಅದೇ ಠಾಣೆಯ ಸಿಬ್ಬಂದಿ ಗಂಗರಾಜು ಮತ್ತು ಅಮುಲ್ ಅವರು ಬೇಡಿಕೆ ಇಟ್ಟಿದ್ದರು. ಹಂಸವೇಣಿ ಅವರು ಬುಧವಾರ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಹಣದ ಸಮೇತ ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.