ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಕ್–ಟ್ಯಾಂಕರ್ ಡಿಕ್ಕಿ: ಸಿನಿಮಾ ನಿರ್ದೇಶಕನ ಪುತ್ರ ಸಾವು

Last Updated 3 ಜುಲೈ 2021, 18:21 IST
ಅಕ್ಷರ ಗಾತ್ರ

ಬೆಂಗಳೂರು: ಬೈಕ್‌ನಲ್ಲಿಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸಿನಿಮಾ ನಿರ್ದೇಶಕರೊಬ್ಬರ ಪುತ್ರ ಮೃತಪಟ್ಟಿರುವ ಘಟನೆ ಬ್ಯಾಡರಹಳ್ಳಿಯ ನ್ಯೂ ಲಿಂಕ್ ರಸ್ತೆಯಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದೆ.

ಮಯೂರ್ (20) ಮೃತಪಟ್ಟ ಬೈಕ್‌ ಸವಾರ. ಇವರು ನಟ ಹಾಗೂ ನಿರ್ದೇಶಕ ಸೂರ್ಯೋದಯ ಪೆರಂಪಳ್ಳಿ ಅವರ ಪುತ್ರ.

ಸ್ನೇಹಿತನ ಕೆಟಿಎಂ ಬೈಕ್‌ ಪಡೆದಿದ್ದ ಮಯೂರ್, ನ್ಯೂಲಿಂಕ್ ರಸ್ತೆಯಲ್ಲಿವೇಗವಾಗಿ ಚಾಲನೆ ಮಾಡುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದ್ದ ಪ‍ರಿಣಾಮ ಮಯೂರ್ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

‘ಮಯೂರ್ ಮೃತದೇಹವನ್ನುವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಯಿತು. ಘಟನೆ ಸಂಬಂಧಟ್ಯಾಂಕರ್ ಚಾಲಕ ಮಣಿ‌ ಎಂಬಾತನನ್ನು ವಶಕ್ಕೆ‍ಪಡೆಯಲಾಗಿದ್ದು,ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ಪೊಲೀಸರು ಹೇಳಿದರು.

ಮೃತರ ತಂದೆ ಸೂರ್ಯೋದಯ ಅವರು ‘ದೇಯಿ ಬೈದೆತಿ’ ಎಂಬ ತುಳು ಹಾಗೂಕನ್ನಡ ಚಿತ್ರಗಳನ್ನು ನಿರ್ದೇಶಿಸಿದ್ದು, ನಟನೆಯೂ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT