ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆಯಾಗುವ ಆಮಿಷ: ₹ 3.90 ಲಕ್ಷ ಕಿತ್ತ ಆನ್‌ಲೈನ್ ವರ

Last Updated 6 ಜನವರಿ 2020, 2:19 IST
ಅಕ್ಷರ ಗಾತ್ರ

ಬೆಂಗಳೂರು: ವೈವಾಹಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಅರ್ಮನ್ ಮಲ್ಲಿಕ್ ಎಂಬಾತ ಉಡುಗೊರೆ ಆಮಿಷವೊಡ್ಡಿ ನಗರದ ಮಹಿಳೆಯೊಬ್ಬರಿಂದ ₹3.90 ಲಕ್ಷ ಪಡೆದು ವಂಚಿಸಿದ್ದು, ಆಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಸ್ಥಳೀಯ ನಿವಾಸಿ ಆಗಿರುವ 40 ವರ್ಷದ ಮಹಿಳೆ ದೂರು ನೀಡಿದ್ದಾರೆ. ವಂಚನೆ (ಐಪಿಸಿ 420) ಆರೋಪದಡಿ ಅರ್ಮನ್ ಮಲ್ಲಿಕ್ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಈ ಮೊದಲೇ ಮಹಿಳೆಗೆ ಮದುವೆ ಆಗಿತ್ತು. ಪತಿ ತೀರಿಕೊಂಡಿದ್ದರು. ಎರಡನೇ ಮದುವೆಯಾಗಲು ತೀರ್ಮಾನಿಸಿದ್ದ ಮಹಿಳೆ ವೈವಾಹಿಕ ಜಾಲತಾಣದಲ್ಲಿ ಖಾತೆ ತೆರದಿದ್ದರು. ಅಲ್ಲಿಯೇ ಆರೋಪಿಯ ಪರಿಚಯವಾಗಿತ್ತು. ವಿದೇಶದಲ್ಲಿ ನೆಲೆಸಿರುವುದಾಗಿ ಹೇಳಿದ್ದ ಆರೋಪಿ, ಕೆಲ ತಿಂಗಳು ಬಿಟ್ಟು ಭಾರತಕ್ಕೆ ಬಂದು ಮದುವೆಯಾಗುವುದಾಗಿ ನಂಬಿಸಿದ್ದ.’

‘ಮದುವೆಗೂ ಮುನ್ನ ವಜ್ರದ ಆಭರಣಗಳನ್ನು ಉಡುಗೊರೆಯಾಗಿ ನೀಡುವುದಾಗಿ ಆತ ಹೇಳಿದ್ದ. ದೆಹಲಿಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಡಿ. 30ರಂದು ಮಹಿಳೆಗೆ ಕರೆ ಮಾಡಿದ್ದ ಆರೋಪಿ, ‘ಉಡುಗೊರೆ ಬಂದಿದೆ. ಶುಲ್ಕ ಪಾವತಿ ಮಾಡಬೇಕು’ ಎಂದಿದ್ದ. ಅದನ್ನು ನಂಬಿ ಮಹಿಳೆ ₹3.90 ಲಕ್ಷ ತುಂಬಿದ್ದರು. ಅದಾದ ನಂತರ ಆರೋಪಿ ಮೊಬೈಲ್ ಸ್ವಿಚ್‌ ಆಫ್‌ ಮಾಡಿದ್ದಾನೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT