ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಆರ್‌.ಪುರ: ಸಂವಿಧಾನ ಉಳಿಸಲು ಹೋರಾಟ ಅನಿವಾರ್ಯ- ಡಿ.ಕೆ. ಮೋಹನ್

Published 6 ಡಿಸೆಂಬರ್ 2023, 16:17 IST
Last Updated 6 ಡಿಸೆಂಬರ್ 2023, 16:17 IST
ಅಕ್ಷರ ಗಾತ್ರ

ಕೆ.ಆರ್‌.ಪುರ: ಭಾರತ ದೇಶದ ಸಂವಿಧಾನವು ಶೋಷಿತರ, ದಿನ ದಲಿತರ, ತುಳಿತಕ್ಕೆ ಒಳಗಾದವರ ಪರವಾಗಿ ಇರುವಂತಹ ಪವಿತ್ರ ಗ್ರಂಥ. ಅದನ್ನು ನೀಡಿದವರು ಅಂಬೇಡ್ಕರ್‌ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಕೆ. ಮೋಹನ್ ಹೇಳಿದರು.

ಕೆ.ಆರ್.ಪುರ ಸಮೀಪದ ಹೊರಮಾವು ಜಯಂತಿನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನದ ಅಂಗವಾಗಿ  ಅಂಬೇಡ್ಕರ್ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ನಿರಂತರ ಶೋಷಣೆಗೆ ಒಳಗಾಗಿರುವ ಜನರು ತಮ್ಮ ಹಕ್ಕುಗಳನ್ನು ಪಡೆಯಲು ಸಂವಿಧಾನ ಮೂಲಧಾರವಾಗಿದೆ. ಸಂವಿಧಾನ ಉಳಿಸಲು ಹೋರಾಟ ಅನಿವಾರ್ಯ ಎಂದರು.

ಕಾಂಗ್ರೆಸ್ ಮುಖಂಡ ಅಗರ ಪ್ರಕಾಶ್, ಬ್ಲಾಕ್ ಅಧ್ಯಕ್ಷ ಸಿ.ವೆಂಕಟೇಶ್, ಮುಖಂಡರಾದ ಅಗರ ಪ್ರಕಾಶ್, ನಂಜಪ್ಪ, ಮುನಿರಾಜು, ಪ್ರಸನ್ನ, ಸೆಬಾಸ್ಟಿನ್, ಸವಿತಾ, ಸುನೀಲ್ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT