ಬೆಂಗಳೂರು: ದಿವಂಗತ ಅನಂತಕುಮಾರ್ ಅವರ ಅಪೂರ್ಣ ಕೆಲಸಗಳು ಮತ್ತು ಕನಸುಗಳನ್ನು ಪೂರ್ಣಗೊಳಿಸಲು ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಮುಂದಾಗಬೇಕು ಎಂದುತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ ಸಲಹೆ ನೀಡಿದರು.

‘ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಂತೆ ತೇಜಸ್ವಿನಿ ಅವರೂ ದೇಶಕ್ಕೆ ಕೊಡುಗೆಯಾಗಲಿ. ಕರ್ನಾಟಕ ಮತ್ತು ದೆಹಲಿಗೆ ಕೊಂಡಿಯಾಗಿ ಮಹತ್ವದ ಪಾತ್ರವಹಿಸಲಿ’ ಎಂದು ಅವರು ಭಾನುವಾರ ಅನಂತನಮನ ಕಾರ್ಯಕ್ರಮದಲ್ಲಿ ಹಾರೈಸಿದರು.

ತೇಜಸ್ವಿನಿಯವರು ಜನ ಸಾಮಾನ್ಯರ ದೂರು– ದುಮ್ಮಾನಗಳನ್ನು ತಾಯಿಯ ಹೃದಯದಿಂದ ಆಲಿಸುತ್ತಾರೆ. ಆದ್ದರಿಂದ ಮುಂಬರುವ ದಿನಗಳಲ್ಲಿ ಚುನಾಯಿತ ಪ್ರತಿನಿಧಿಯಾಗಿ ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದೂ ಸ್ವಾಮೀಜಿ ಹೇಳಿದರು.

ಚಿತ್ರ ಪ್ರದರ್ಶನಕ್ಕೆ ಚಾಲನೆ:ಅನಂತಕುಮಾರ್ ಅವರ ಬಾಲ್ಯದಿಂದ ಕೊನೆಯ ಹಂತದವರೆಗಿನ ನೆನಪನ್ನು ಕಟ್ಟಿಕೊಡುವ ಛಾಯಾಚಿತ್ರಗಳ ಪ್ರದರ್ಶನ ‘ಅನಂತಯಾನ’ಕ್ಕೆ ಭಾನುವಾರ ಬಸವನಗುಡಿ ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ಚಾಲನೆ ನೀಡಲಾಯಿತು.

ಮೂರು ದಿನಗಳ ‘ಅನಂತ ನಮನ’ ಕಾರ್ಯಕ್ರಮದ ಭಾಗವಾಗಿ ‘ಅನಂತ ಯಾನ ಚಿತ್ರ ನಮನ’ ಏರ್ಪಡಿಸಲಾಗಿತ್ತು. ಛಾಯಾಚಿತ್ರ ಪ್ರದರ್ಶನ ಜನವರಿ 2ರವರೆಗೆ ಇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.