ಬೆಂಗಳೂರು: ಅಥ್ಲೀಟ್ ಅಂಜು ಬಾಬಿ ಜಾರ್ಜ್ ಮತ್ತು ತರಬೇತುದಾರ ರಾಬರ್ಟ್ ಬಾಬಿ ಜಾರ್ಜ್ ಸ್ಥಾಪಿಸಿರುವ ಕ್ರೀಡಾ ತರಬೇತಿ ಸಂಸ್ಥೆ ಅಂಜು ಬಾಬಿ ಹೈ ಪರ್ಫಾರ್ಮೆನ್ಸ್ (ಎಬಿಎಚ್ಪಿ) ಜೊತೆ ಬೆಂಗಳೂರಿನ ಅಲಯನ್ಸ್ ವಿಶ್ವವಿದ್ಯಾಲಯವು ಒಡಂಬಡಿಕೆಗೆ ಸಹಿ ಹಾಕಿದೆ.

ದೇಶದ ಯುವಜನರಿಗೆ ಕ್ರೀಡಾ ನಿರ್ವಹಣೆ ಮತ್ತು ಫಿಟ್ನೆಸ್ ಕ್ಷೇತ್ರದಲ್ಲಿ ಹೊಸ ಅವಕಾಶ ಒದಗಿಸುವುದು ಪ್ರಮುಖ ಉದ್ದೇಶವಾಗಿದೆ. ನಾಲ್ಕು ವರ್ಷದ ಬ್ಯಾಚುಲರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಶನ್ (ಬಿಬಿಎ)– ಕ್ರೀಡಾ ನಿರ್ವಹಣೆ ಕೋರ್ಸ್ ಪ್ರಾರಂಭಿಸಲಾಗುತ್ತದೆ. 2026ರೊಳಗೆ 60 ವಿದ್ಯಾರ್ಥಿಗಳೊಂದಿಗೆ ಪ್ರವೇಶ ಆರಂಭವಾಗಲಿದೆ ಎಂದು ವಿಶ್ವವಿದ್ಯಾಲಯ ಕುಲಪತಿ ಪ್ರಿಸ್ಟ್ಲಿ ಶಾನ್ ತಿಳಿಸಿದರು.

ಕ್ರೀಡಾ ನಾಯಕತ್ವ, ಆಟಗಾರರ ಮಾರ್ಗದರ್ಶನ ಮತ್ತು ಫಿಟ್ನೆಸ್ ನಿರ್ವಹಣೆ ಸೇರಿ ತರಗತಿ ಬೋಧನಾ ಕಾರ್ಯಕ್ರಮವನ್ನು ಎಬಿಎಚ್ಪಿ ಮತ್ತು ಅಲಯನ್ಸ್ ವಿಶ್ವವಿದ್ಯಾಲಯ ಜಂಟಿಯಾಗಿ ನೀಡಲಿವೆ. ಪಠ್ಯಕ್ರಮ, ಅತಿಥಿ ಉಪನ್ಯಾಸಕರು, ಕ್ರೀಡಾ ಕ್ಷೇತ್ರದ ಗಣ್ಯರು ಮತ್ತು ವೃತ್ತಿಪರರಿಂದ ಮಾರ್ಗದರ್ಶನ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಒಡಂಬಡಿಕೆ ಭಾಗವಾಗಿ ವಿಶ್ವವಿದ್ಯಾಲಯವು ಅಂಜು ಬಾಬಿ ಜಾರ್ಜ್ ವುಮೆನ್ ಅಥ್ಲೀಟ್ ವಿದ್ಯಾರ್ಥಿ ವೇತನ ಆರಂಭಿಸುತ್ತಿದ್ದು, ರಾಜ್ಯ, ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಇಬ್ಬರು ಮಹಿಳಾ ಕ್ರೀಡಾಪಟುಗಳಿಗೆ ಆರ್ಥಿಕ ನೆರವು ನೀಡಲಾಗುತ್ತದೆ.

ಅಂಜು ಬಾಬಿ ಜಾರ್ಜ್ ಮಾತನಾಡಿ, ‘ಭವಿಷ್ಯದ ಚಾಂಪಿಯನ್ಗಳು ಮತ್ತು ಕ್ರೀಡಾ ನಾಯಕರನ್ನು ಬೆಳೆಸುವ ಗುರಿ ಹೊಂದಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.