ಗುರುವಾರ , ಜೂನ್ 30, 2022
23 °C

ಕೋವಿಡ್‌–19 | ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಾಯಿಯ ಎದೆಹಾಲು ಮಕ್ಕಳನ್ನು ಅನಾರೋಗ್ಯದಿಂದ ರಕ್ಷಿಸುತ್ತದೆ. ಎದೆ ಹಾಲಿನಲ್ಲಿ ಇರುವ ಪ್ರತಿಕಾಯಗಳು ಸೋಂಕು ಮತ್ತು ಇತರ ವೈರಸ್‌ ವಿರುದ್ಧ ಹೋರಾಡಲು ಸಹಾಯ ಮಾಡುವುದು. ಮೊದಲ 6 ತಿಂಗಳ ಕಾಲ ಮಗುವಿಗೆ ಎದೆಹಾಲು ಮಾತ್ರ ನೀಡಬೇಕು. ನಂತರ ಒಂದು ಒಂದುವರೆ ವರ್ಷದವರೆಗೂ ಎದೆಹಾಲು ಕುಡಿಸಬಹುದು. ವೃತ್ತಿನಿಮಿತ್ತ ಹಾಲು ಕುಡಿಸಲು ಸಾಧ್ಯವಾಗುತ್ತಿಲ್ಲ ಎಂಬ ನೆಪಗಳು ಮಕ್ಕಳ ಪ್ರತಿರೋಧಕ ಶಕ್ತಿಯನ್ನೇ ಕುಂಠಿತಗೊಳ್ಳಿಸಬಹುದು. ಹಾಲು ಉತ್ಪತ್ತಿ ಕಡಿಮೆಯಾದರೆ ಲ್ಯಾಕ್ಟೇಶನ್ ಕನ್ಸಲ್ಟೆಂಟ್ಸ್ ಅಥವ ವೈದ್ಯರ ಸಲಹೆ ಪಡೆದು ಹಾಲು ಉತ್ಪತ್ತಿಗೆ ಚಿಕಿತ್ಸೆ ಪಡೆಯಬಹುದು, ಫಾರ್ಮುಲ ಹಾಲು ಅಥವಾ ಹಸುವಿನ ಹಾಲು ನೀಡಬಾರದು.

ಸಮತೋಲಿತ ಪೌಷ್ಟಿಕ ಆಹಾರ
ಮಗುವಿಗೆ ಅಗತ್ಯವಾದ ಪೌಷ್ಠಿಕಾಂಶಕ್ಕೆ ವಿವಿಧ ಆಹಾರ ಮತ್ತು ತರಕಾರಿಗಳನ್ನು ಪರಿಚಯಿಸುವ ಅಗತ್ಯವಿರುತ್ತದೆ, ಇದರಿಂದ ದೇಹ ಸಾಕಷ್ಟು ಪ್ರತಿಕಾಯಗಳನ್ನು ತಯಾರಿಸಲು ಸಹಾಯಕ. ಆಯಾ ಋತುಮಾನಕ್ಕೆ ತಕ್ಕಂತೆ ಹಣ್ಣು, ತರಕಾರಿಗಳನ್ನು ಸೇವಿಸಬಹುದು. ಚೆನ್ನಾಗಿ ಹುರಿದು ಬೇಯಿಸಿದ ಮೀನು, ಮೊಟ್ಟೆ, ಮಾಂಸಗಳ ನಿಯಮಿತ ಸೇವನೆಯಿಂದ ಅಗತ್ಯ ಕೊಬ್ಬು, ಪ್ರೋಟಿನ್‌ಗಳು ದೊರೆಯುತ್ತವೆ. 

ದೈಹಿಕ ವ್ಯಾಯಾಮ
ದೀರ್ಘಕಾಲದವರೆಗೆ ಒಂದೇ ಕಡೆ ಕುಳಿತುಕೊಳ್ಳು ವುದರಿಂದ ಸ್ನಾಯುಗಳು ಬಿಗಿತಗೊಳ್ಳುತ್ತವೆ. ನಿಯಮಿತವಾಗಿ ವ್ಯಾಯಾಮ, ಯೋಗ ಮಾಡುವುದರಿಂದ ದೇಹ ಸ್ನಾಯುಗಳು ಸಕ್ರಿಯಗೊಳ್ಳುತ್ತವೆ. ಹೊಸ ಸ್ನಾಯುಕೋಶಗಳ ಬೆಳವಣಿಗೆಗೆ ಇದು ಸಹಕಾರಿ. ಪ್ರತಿದಿನ ಮುಂಜಾನೆ ಹಾಗೂ ಮ್ಸುಸಂಜೆ ಒಂದು ಗಂಟೆ ವ್ಯಾಯಾಮ ಮಾಡಿ. ವೇಗದ ನಡಿಗೆ, ಪ್ರಾಣಯಾಮದಿಂದ ಉಸಿರಾಟದ ಸಮಸ್ಯೆ ನಿವಾಯಣೆಯಾಗುತ್ತದೆ. ಶಿಶುಗಳನ್ನು ಸದಾ ಎತ್ತಿಕೊಳ್ಳಬೇಡಿ. ಮುಕ್ತ ಸ್ಥಳದಲ್ಲಿ ಆಡಲು ಬಿಡಿ. 

ಸಾಕಷ್ಟು ನಿದ್ದೆ ಮಾಡಿ
ಒತ್ತಡ ಹಾಗೂ ಶ್ರಮದಾಯಕ ಕೆಲಸಗಳ ನಡುವೆ ವಿಶ್ರಾಂತಿ ದೇಹಕ್ಕೆ ತುಂಬಾ ಅಗತ್ಯ. ದೇಹ ಚೈತನ್ಯಪೂರ್ಣವಾಗಿ ಇರಬೇಕಾದರೆ ನಿದ್ದೆ ತುಂಬಾ ಅಗತ್ಯ. ನಿದ್ರೆ ಅಸಮತೋಲನೆಯಿಂದ ಪಿತ್ತ ಹೆಚ್ಚಾಗಿ ವಾಕರಿಕೆ, ಹಸಿವಿಲ್ಲದೆ ಇರುವು, ನಿಶಕ್ತಿ ಹೆಚ್ಚಾಗಬಹುದು. ಶಿಶುಗಳಿಗೆ ದಿನಕ್ಕೆ 11 ರಿಂದ 14 ಗಂಟೆ, ಒಂದು ವರ್ಷದ ಮಕ್ಕಳಿಗೆ 10 ರಿಂದ 12 ಗಂಟೆ ನಿದ್ದೆ ಬೇಕು. ದೊಡ್ಡವರಿಗೆ ಸರಾಸರಿ 8 ರಿಂದ 10 ಗಂಟೆಗಳ ನಿದ್ದೆ ಅವಶ್ಯಕ.

ಸ್ವಯಂ ಔಷಧ ಬೇಡ
ಪ್ರಮಾಣಿತ ಔಷಧವನ್ನು ಜ್ವರ ಅಥವಾ ಕೆಮ್ಮಿಗೆ ನೀಡುವುದು ಸಾಮಾನ್ಯವಾದ ವಿಷಯ. ಕೆಲವೊಮ್ಮೆ ಪೋಷಕರು ವೈದ್ಯರ ಸಲಹೆ ತೆಗೆದುಕೊಳ್ಳದೆ ಮಕ್ಕಳಿಗೆ ತಮ್ಮದೇ ಆದ ಪ್ರಕಾರ ಚಿಕಿತ್ಸೆ ನೀಡುತ್ತಾರೆ. ಆದರೆ ಇದು ಮಗುವಿನ ರೋಗ ನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ.

ನಂತರದ ದಿನಗಳಲ್ಲಿ ಆರೋಗ್ಯಕ್ಕೆ ಇದು ಅಪಾಯಕಾರಿ. ಅನಗತ್ಯ ಪ್ರತಿಜೀವಕಗಳು (ಆಂಟಿಬಯಾಟಿಕ್ಸ್‌) ದೀರ್ಘಾವಧಿಯಲ್ಲಿ ಮಗುವಿನ ವಿನಾಯಿತಿಗೆ ಸಹ ಪರಿಣಾಮ ಬೀರುತ್ತದೆ. ಸ್ವಯಂ ಔಷಧ ನೀಡುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಆರೋಗ್ಯಕರ ಪರಿಸರ
ಮಕ್ಕಳಿಗೆ ಒತ್ತಡ ಮುಕ್ತ ಪರಿಸರವು ಅಗತ್ಯವಿರುತ್ತದೆ, ಅವರಿಗೆ ಹೆಚ್ಚು ಪ್ರೀತಿ ಮತ್ತು ಆರೈಕೆಯ ಅವಶ್ಯಕತೆಯಿರುವುದು. ಮಕ್ಕಳು ಸಾಮಾಜಿಕ ಜೀವನದ ಜಟಿಲತೆಗಳನ್ನು ಅರ್ಥಮಾಡಿಕೊಳ್ಳಲು ಚಿಕ್ಕವರಾದರು ಸಹ, ಗಂಭೀರ ವಿಷಯದ ಚರ್ಚೆಗಳನ್ನು ಮಕ್ಕಳ ಮುಂದೆ ತಪ್ಪಿಸಬಹುದು. ಮಕ್ಕಳಿಗೆ ಮನೆ ಸುರಕ್ಷಿತ ಮತ್ತು ಪ್ರೀತಿಸುವ ಸ್ಥಳವಾಗಬೇಕು.

ಮಾನಸಿಕ ಆರೋಗ್ಯ
ಭಯದ ವಾತಾವರಣ ಮತ್ತು ಬೆದರಿಕೆಯು ಮಗುವಿನ ಮಾನಸಿಕ ಸ್ಥಿತಿಯ ಮೇಲೆ ಗಂಭೀರವಾದ ಪರಿಣಾಮ ಬೀರುತ್ತದೆ. ಮಗುವು ಸಂತೋಷವಾಗಿರಬೇಕು ಇದರಿಂದ ವ್ಯವಸ್ಥೆಯು ಉತ್ತಮ ಕಾರ್ಯವನ್ನು ನಿರ್ವಹಿಸಲು ಸಹಾಯಕ. ಪೋಷಕರಾಗಿ, ಮಗುವಿನೊಂದಿಗೆ ಸರಿಯಾದ ಸಂವಹನವನ್ನು ಅಭಿವೃದ್ಧಿಪಡಿಸಬೇಕಾದ ಅಗತ್ಯವಿರುತ್ತದೆ. ಮಕ್ಕಳು ಪ್ರತಿಯೊಂದೂ ಭಯವಿಲ್ಲದೆ ಮುಕ್ತವಾಗಿ ಪೋಷಕರೊಂದಿಗೆ ಹಂಚಿಕೊಳ್ಳುತ್ತಾರೆ. ಭಾವನಾತ್ಮಕವಾಗಿ ಸ್ಥಿರವಾದ ಮಕ್ಕಳು ಆರೋಗ್ಯಕರವಾಗಿ ಮತ್ತು ಸ್ಥಿರವಾಗಿರುತ್ತಾರೆ.

ಜಂಕ್ ಆಹಾರ ಬೇಡ
ಚಿಪ್ಸ್, ಚಾಕೊಲೇಟುಗಳು ಮತ್ತು ಸಿದ್ಧ ಆಹಾರ ಸೇವನೆ ನಿಲ್ಲಿಸಿ. ಒಮ್ಮೆಲೆ ನಿಲ್ಲಿಸುವುದು ಅಸಾಧ್ಯ. ಅವುಗಳಿಗೆ ಪರ್ಯಾಯವಾಗಿ ಹಣ್ಣು ಅಥವಾ ತರಕಾರಿಗಳ ಸೇವನೆಯನ್ನು ಮಕ್ಕಳಿಗೆ ಅಭ್ಯಾಸ ಮಾಡಿಸಿ. ಈಗಾಗಲೇ ಜಂಕ್ ಆಹಾರ ಸೇವನೆಯಿಂದಾಗುವ ದುಷ್ಪರಿಣಾಮಗಳು ಮತ್ತು ಕಾರಣವನ್ನು ನಾವು ಅರ್ಥೈಸಿ ಹೇಳಬೇಕು ಮತ್ತು ಜಂಕ್ ಆಹಾರವು ಯಾವುದೇ ಪೌಷ್ಟಿಕಾಂಶದ ಮೌಲ್ಯ ಹೊಂದಿರುವುದಿಲ್ಲ.

ಅತಿಯಾದ ಸ್ಯಾನಿಟೈಸರ್‌ ಬಳಕೆ ಬೇಡ
ನೈರ್ಮಲ್ಯ ಅಭ್ಯಾಸವೆಂದರೆ ಅತಿಯಾದ ಸ್ಯಾನಿಟೈಸರ್‌ ಬಳಕೆಯಲ್ಲ. ಹೆಚ್ಚು ಸ್ಯಾನಿಟೈಸರ್‌ ಬಳಕೆಯಿಂದ ಚರ್ಮ ತೇವಾಂಶ ಕಳೆದುಕೊಂಡು ಒಣಗುತ್ತದೆ. ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವಾಗ ಅಥವಾ ಸಾರ್ವಜನಿಕವಾಗಿ ವಸ್ತುಗಳನ್ನು ಮುಟ್ಟಿದ ನಂತರ ಸ್ಯಾನಿಟೈಸರ್‌ ಬಳಸಬಹುದು. ಸ್ಯಾನಿಟೈಸರ್‌ಗಳ  ಅತಿಯಾದ ಬಳಕೆ ಕೆಟ್ಟ ಬ್ಯಾಕ್ಟೀರಿಯಾದೊಂದಿಗೆ ಉತ್ತಮ ಬ್ಯಾಕ್ಟೀರಿಯಾಗಳ ಅಸಮತೋಲನವನ್ನು ಉಂಟುಮಾಡುತ್ತದೆ. ನೀರಿನಿಂದ ಕೈಯನ್ನು ಚೆನ್ನಾಗಿ ತೊಳೆಯುವುದು ಸುರಕ್ಷಿತ ಮತ್ತು ಆರೋಗ್ಯಕರ ಪದ್ಧತಿ. ಶೌಚಾಲಯ ಕೊಠಡಿಯನ್ನು ಬಳಸಿದ ನಂತರ ಸಾಬೂನು ಮತ್ತು ನೀರಿನಿಂದ ಕೈಗಳನ್ನು ತೊಳೆಯುವುದು ಒಳ್ಳೆಯ ಅಭ್ಯಾಸ. ನಿಯಮಿತವಾಗಿ ಸ್ನಾನ ಮಾಡುವುದರಿಂದ ಬೆವರು ಅಥವಾ ಬಿಸಿಲಿನಿಂದ ಉಂಟಾಗಬಹುದಾದ ಬ್ಯಾಕ್ಟೀರಿಯಾಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು