ಬಿಎಸ್‌ಡಬ್ಲ್ಯುಎಂಎಲ್: ಸರ್ಫರಾಜ್ ಖಾನ್ ನೇಮಕ

ಬೆಂಗಳೂರು: ರಾಜಧಾನಿಯ ಕಸದ ಸಮಸ್ಯೆ ನಿವಾರಣೆಗೆ ರಚಿಸಲಾಗಿರುವ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ (ಬಿಎಸ್‌ಡಬ್ಲ್ಯುಎಂಎಲ್) ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣಾ ವಿಭಾಗದ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಅವರನ್ನು ನೇಮಕ ಮಾಡಲಾಗಿದೆ.
ಕಂಪನಿಯ ಮುಖ್ಯನಿರ್ವಹಣಾ ಅಧಿಕಾರಿಯೂ ಆಗಿರುವ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಈ ನೇಮಕ ಮಾಡಿದ್ದಾರೆ.
ಕಂಪನಿಯ ವ್ಯವಸ್ಥಾಪಕ ನಿರ್ದೇಶಕರ ಪರವಾಗಿ ಒಪ್ಪಂದಗಳಿಗೆ ಸಹಿ ಹಾಕುವ, ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಸರ್ಫರಾಜ್ ಖಾನ್ ಅವರಿಗೆ ನೀಡಲಾಗಿದೆ.
2021ರ ಮೇ 22ರಂದು 2013ರ ಕಂಪನಿ ಕಾಯ್ದೆಯ ಅನ್ವಯ, ಬಿಎಸ್‌ಡಬ್ಲ್ಯುಎಂಎಲ್ ರಚನೆಯಾಗಿದೆ. ಕಂಪನಿಯ ಮೊದಲ ನಿರ್ದೇಶಕರ ಮಂಡಳಿ ಸಭೆಯು ಶುಕ್ರವಾರ ನಡೆದಿದ್ದು, ಸಭೆಯ ನಿರ್ಣಯದಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.