ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ದರೋಡೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Published 9 ಜೂನ್ 2024, 15:51 IST
Last Updated 9 ಜೂನ್ 2024, 15:51 IST
ಅಕ್ಷರ ಗಾತ್ರ

ಬೆಂಗಳೂರು: ದರೋಡೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪುಲಕೇಶಿನಗರ ಠಾಣೆಯ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ₹60 ಸಾವಿರ ಮೌಲ್ಯದ ಒಂದು ದ್ವಿಚಕ್ರ ವಾಹನ ಹಾಗೂ ದರೋಡೆ ಮಾಡಿದ್ದ ಪರ್ಸ್‌ ಜಪ್ತಿ ಮಾಡಿಕೊಂಡಿದ್ದಾರೆ.

ಜೆ.ಸಿ. ನಗರದ ಮಹಮ್ಮದ್ ಜಬಿ (22) ಹಾಗೂ ಭಾರತಿನಗರದ ರೆಹಾನ್ (20) ಬಂಧಿತ ಆರೋಪಿಗಳು.

ಪುಲಕೇಶಿನಗರ ಹೇನ್ಸ್‌ ರಸ್ತೆಯ ಹರಿದ್ರ ಗಣಪತಿ ದೇವಸ್ಥಾನ ಬಳಿ ಭಾನುವಾರ ಬೆಳಿಗ್ಗೆ 8.45ಕ್ಕೆ ಬಾಗಲೂರು ಲೇಔಟ್‌ ನಿವಾಸಿಯೊಬ್ಬರ ಮೊಬೈಲ್‌, ಪರ್ಸ್‌ ಕಿತ್ತುಕೊಂಡಿದ್ದರು. ಬಳಿಕ ಮೊಬೈಲ್ ವಾಪಸ್‌ ಕೊಟ್ಟು, ಪರ್ಸ್‌ನೊಂದಿಗೆ ಪರಾರಿಯಾಗಿದ್ದರು. ಈ ಬಗ್ಗೆ ಪುಲಕೇಶಿನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

‘ಮಹಮ್ಮದ್ ಜಬಿ ವಿರುದ್ಧ ಈಗಾಗಲೇ ಕಮರ್ಷಿಯಲ್ ಸ್ಟ್ರೀಟ್‌, ಎಚ್ಎಸ್ಆರ್ ಲೇಔಟ್‌, ಹೆಬ್ಬಾಳ, ಕೆ.ಆರ್. ಪುರ, ಸದಾಶಿವನಗರ ಠಾಣೆಗಳ ವ್ಯಾಪ್ತಿಯಲ್ಲಿ ಕಳ್ಳತನ, ದರೋಡೆ ಪ್ರಕರಣಗಳು ದಾಖಲಾಗಿವೆ. ಕೊಲೆ ಮತ್ತು ದರೋಡೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದಾನೆ’ ಎಂದು ಪೊಲೀಸರು ತಿಳಿಸಿದರು.

ರೆಹಾನ್
ರೆಹಾನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT