‘ಪ್ರಮುಖ ಆರೋಪಿ ನಜ್ಮಾ, ಜಾಲತಾಣಗಳಲ್ಲಿ ಯುವಕರ ಜೊತೆ ಸಲುಗೆ ಬೆಳೆಸಿಕೊಳ್ಳುತ್ತಿದ್ದಳು. ನಂತರ ಅವರ ಮೊಬೈಲ್ ಸಂಖ್ಯೆ ಪಡೆದು, ಸಲುಗೆಯಿಂದ ಮಾತನಾಡಿ, ಮನೆಗೆ ಕರೆಸಿಕೊಂಡು ಹನಿಟ್ರ್ಯಾಪ್ ಮಾಡುತ್ತಿದ್ದಳು. ಇದಕ್ಕೆ ಅತೀಕ್, ಕರೀಂ ಸಾಥ ನೀಡುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.
‘ಬೆಂಗಳೂರಿನ ಯುವಕರನ್ನೇ ಗುರಿಯಾಗಿಸಿಕೊಂಡಿದ್ದ ನಜ್ಮಾ, ನಂತರ ಅವರೊಂದಿಗೆ ಕಷ್ಟ–ಸುಖ ಮಾತನಾಡಿಕೊಂಡು ಅತ್ಮೀಯತೆ ಬೆಳೆಸಿಕೊಳ್ಳುತ್ತಿದ್ದಳು. ಅವರಿಂದ ಹಣ ಪಡೆದು ಹಿಂತಿರುಗಿಸುವ ಮೂಲಕ ವಿಶ್ವಾಸ ಗಳಿಸುತ್ತಿದ್ದಳು. ‘ನಮ್ಮ ಮನೆಯಲ್ಲಿ ಯಾರೂ ಇಲ್ಲ, ನೀವು ಮನೆಗೆ ಬನ್ನಿ’ ಎಂದು ಯುವಕರನ್ನು ಆಹ್ವಾನಿಸುತ್ತಿದ್ದಳು’ ಎಂದು ಮೂಲಗಳು ತಿಳಿಸಿವೆ.
‘ಸಂಚು ತಿಳಿಯದೇ ಮನೆಗೆ ತೆರಳುತ್ತಿದ್ದ ಯುವಕರನ್ನು ಲೈಂಗಿಕವಾಗಿ ಪ್ರಚೋದಿಸಿ ಕೋಣೆಗೆ ಕರೆದೊಯ್ಯುತ್ತಿದ್ದಳು. ಕೋಣೆಯಲ್ಲಿ ಇರುತ್ತಿದ್ದ ಉಳಿದ ಆರೋಪಿಗಳು ಯುವಕರನ್ನು ಬೆದರಿಸಿ, ಹಣ ಸುಲಿಗೆ ಮಾಡುತ್ತಿದ್ದರು. ಹಣ ನೀಡದಿದ್ದರೆ ಅತ್ಯಾಚಾರ ಮಾಡಿದ್ದಾರೆಂದು ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಸುತ್ತಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.