ಬುಧವಾರ, ಜುಲೈ 28, 2021
21 °C

ಮೂವರು ಮಕ್ಕಳ ಮೇಲೆ ತಂದೆ ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೂವರು ಮಕ್ಕಳ ಮೇಲೆ ಹಲ್ಲೆ ನಡೆಸಿರುವ ಆರೋಪದಡಿ ತಮಿಳುನಾಡಿನ ಸೆಲ್ವ (45) ಹಾಗೂ ಪತ್ನಿ ಸತ್ಯಾ (35) ಎಂಬುವರನ್ನು ಜೆ.ಪಿ.ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಸೆಲ್ವ ಇಬ್ಬರನ್ನು ವಿವಾಹವಾಗಿದ್ದ. ಮೊದಲ ಪತ್ನಿ ಅಂಜಲಿ ಕೆಲ ತಿಂಗಳ ಹಿಂದಷ್ಟೇ ನಿಧನರಾಗಿದ್ದರು. ಮೂರು ಮಕ್ಕಳನ್ನು ಜೆ.ಪಿ.ನಗರದಲ್ಲಿದ್ದ ಎರಡನೇ ಹೆಂಡತಿ ಸತ್ಯಾ ಮನೆಗೆ ಕರೆದೊಯ್ದಿದ್ದ. ಮಕ್ಕಳು ಸರಿಯಾಗಿ ಮಾತು ಕೇಳುತ್ತಿಲ್ಲ ಎಂದು ಹೆಂಡತಿ ಚಾಡಿ ಹೇಳಿದ್ದಳು’. 

ಇದನ್ನು ನಂಬಿದ್ದ ಸೆಲ್ವ, ಅಡುಗೆ ಮನೆಯಲ್ಲಿದ್ದ ವಸ್ತುಗಳಿಂದ ಹೊಡೆದು, ದೇಹದ ಮೇಲೆ ಸುಟ್ಟ ರೀತಿಯ ಗಾಯಗಳನ್ನು ಮಾಡಿದ್ದ. ಬೇರೆಯವರಿಗೆ ವಿಚಾರ ತಿಳಿಸದಂತೆ ಹೆದರಿಸಿದ್ದ. ಮಕ್ಕಳು ನೋವು ತಾಳಲಾರದೆ, ಮನೆಯಿಂದ ಹೊರಬಂದಾಗ ಸ್ಥಳೀಯರು ಅವರನ್ನು ರಕ್ಷಿಸಿ, ದೂರು ನೀಡಿದರು’ ಎಂದು ಪೊಲೀಸರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು