ಶುಕ್ರವಾರ, ಡಿಸೆಂಬರ್ 4, 2020
20 °C

ಆಸ್ಟರ್ ಆರ್‌ವಿ ಆಸ್ಪತ್ರೆಯಿಂದ ಅಪಸ್ಮಾರ ಕ್ಲಿನಿಕ್ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಷ್ಟ್ರೀಯ ಅಪಸ್ಮಾರ ದಿನದ ಅಂಗವಾಗಿ ಆಸ್ಟರ್ ಆರ್‌ವಿ ಆಸ್ಪತ್ರೆಯು ವಿಶ್ವದರ್ಜೆಯ ಎಪಿಲೆಪ್ಸಿ (ಅಪಸ್ಮಾರ) ಕ್ಲಿನಿಕ್ ಆರಂಭಿಸಿದೆ.

ವಯಸ್ಕರು ಮತ್ತು ಮಕ್ಕಳ ವಿಭಾಗದಲ್ಲಿ ತರಬೇತಿ ಪಡೆದಿರುವ ಅಪಸ್ಮಾರ ತಜ್ಞರು ಈ ಕ್ಲಿನಿಕ್ ಅನ್ನು
ಪ್ರಾಮಾಣೀಕರಿಸಿದ್ದಾರೆ. ಅಪಸ್ಮಾರದಿಂದ ಬಳಲುತ್ತಿರುವ ವಯಸ್ಕರ ಮತ್ತು ಮಕ್ಕಳ ಜಟಿಲ ಸಮಸ್ಯೆಗಳನ್ನು ಪರಿಹರಿಸಲು ತಜ್ಞರ ತಂಡ ಕಾರ್ಯನಿರ್ವಹಿಸಲಿದೆ. ಸೆಳೆತ, ಜಟಿಲ ಅಪಸ್ಮಾರ, ಅಪಸ್ಮಾರ ಶಸ್ತ್ರ
ಚಿಕಿತ್ಸೆ ಮತ್ತು ಕೀಟೋಜೆನಿಕ್ ಆಹಾರ ಕ್ರಮಕ್ಕೆ ರೋಗಿಗಳು ವಿಶೇಷ ಚಿಕಿತ್ಸೆ ಪಡೆಯಬಹುದು.

ಆಸ್ಟರ್ ಆರ್‌ವಿ ಆಸ್ಪತ್ರೆಯ ಅಪಸ್ಮಾರ ಸಲಹಾ ತಜ್ಞ ಡಾ.ಖೇಣಿ ರವೀಶ್ ರಾಜೀವ್, ‘ವೈದ್ಯಕೀಯ ಕ್ಷೇತ್ರದಲ್ಲಿ ಆಗಿರುವ ಬೆಳವಣಿಗೆಗಳಿಂದಾಗಿ ಅಪಸ್ಮಾರ ನಿರ್ವಹಣೆ ಮಾಡಲು ಮತ್ತು ಸಂಪೂರ್ಣ ಗುಣಪಡಿಸಲು ಸಾಧ್ಯವಿದೆ. ಆದರೂ ಸೆಳೆತ ಅಥವಾ ಫಿಟ್ಸ್ ಕುರಿತಾಗಿ ಜನರಲ್ಲಿ ಕೆಲವು ಮೂಢನಂಬಿಕೆಗಳಿವೆ. ಅಪಸ್ಮಾರ ರೋಗಿಗಳು ಶಾಲೆಗಳಲ್ಲಿ, ಕೆಲಸದ ಸ್ಥಳಗಳಲ್ಲಿ, ವೈವಾಹಿಕ ಜೀವನ
ದಲ್ಲಿ ಎದುರಿಸುವ ಸಾಮಾಜಿಕ ತಾರತಮ್ಯ ಕಡಿಮೆಗೊಳಿಸಲು ಪ್ರಯತ್ನಿಸಲಿದ್ದೇವೆ’ ಎಂದು ವಿವರಿಸಿದರು.

ಆಸ್ಪತ್ರೆಯ ಮುಖ್ಯ ನರರೋಗ ಶಾಸ್ತ್ರಜ್ಞ ಶ್ರೀಕಂಠಸ್ವಾಮಿ, ‘ಭಾರತದ ನರಸಂಬಂಧಿ ರೋಗಗಳಲ್ಲಿ ಅಪಸ್ಮಾರ ನಾಲ್ಕನೇ ಅತಿ ಸಾಮಾನ್ಯ ಖಾಯಿಲೆ. ಅಪಸ್ಮಾರಕ್ಕೆ ಸಂಬಂಧಿಸಿದ ಮಾನಸಿಕ ಆರೋಗ್ಯ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೂ ಈ ಕ್ಲಿನಿಕ್‍ನಲ್ಲಿ ಚಿಕಿತ್ಸೆ ನೀಡಲಾಗುವುದು’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.