ಬೆಂಗಳೂರು: ಕೃತಕ ಬುದ್ಧಿಮತ್ತೆ ಆಧಾರಿತ ‘ಕಂಪ್ಯೂಟರ್ ದೃಷ್ಟಿ’ ತಂತ್ರಜ್ಞಾನದ ನೆರವಿನಿಂದ ಮಕ್ಕಳಲ್ಲಿನ ಆಟಿಸಂ ಲಕ್ಷಣಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ, ರೋಗ ಪತ್ತೆ ಮಾಡಲು ಸಂಶೋಧಕರು ಮುಂದಾಗಿದ್ದಾರೆ.

ನಡವಳಿಕೆ ಆಧಾರಿತ ಈ ಅಧ್ಯಯನವನ್ನು ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ–ಬಿ) ಕೈಗೊಂಡಿದೆ. ಇದಕ್ಕೆ ಸೆಂಟರ್ ಫಾರ್ ಅಡ್ವಾನ್ಸ್ಡ್ ರಿಸರ್ಚ್ ಆ್ಯಂಡ್ ಎಕ್ಸಲೆನ್ಸ್ ಇನ್ ಆಟಿಸಂ ಮತ್ತು ಸೇಂಟ್ ಜಾನ್ಸ್ ಆಸ್ಪತ್ರೆಯ ಸಹಯೋಗವಿದೆ. ಕಂಪ್ಯೂಟರ್ ದೃಷ್ಟಿಯ ನೆರವಿನಿಂದ 18ರಿಂದ 42 ತಿಂಗಳ ಮಕ್ಕಳ ಮೇಲೆ ನಿಗಾ ಇರಿಸಿ, ಆಟಿಸಂನ ವಿವಿಧ ಲಕ್ಷಣಗಳನ್ನು ಗುರುತಿಸಲಾಗುತ್ತದೆ. ಬಳಿಕ ವಿಶ್ಲೇಷಣೆಗೆ ಒಳಪಡಿಸಿ, ಸ್ವಯಂಚಾಲಿತವಾಗಿ ಸಮಸ್ಯೆ ಪತ್ತೆ ಮಾಡಲಾಗುತ್ತದೆ. 2021ರಲ್ಲಿಯೇ ಈ ಅಧ್ಯಯನ ಪ್ರಾರಂಭವಾಗಿದ್ದು, ಈಗಾಗಲೇ ನೂರಕ್ಕೂ ಅಧಿಕ ಮಂದಿಯಲ್ಲಿ ಆಟಿಸಂ ಲಕ್ಷಣಗಳನ್ನು ಗುರುತಿಸಲಾಗಿದೆ. ಇನ್ನೂ ಒಂದು ವರ್ಷ ಈ ಅಧ್ಯಯನ ನಡೆಯಲಿದೆ.

ಆಟಿಸಂ ಎನ್ನುವುದು ನರವ್ಯೂಹಕ್ಕೆ ಸಂಬಂಧಿಸಿದ ಸಮಸ್ಯೆಯಾಗಿದೆ. ಮಿದುಳಿನ ಸಾಮಾನ್ಯ ಬೆಳವಣಿಗೆಯನ್ನು ಕುಂಠಿತಗೊಳಿಸಿ, ಸಂವಹನ, ಸಾಮಾಜಿಕ ಒಡನಾಟ, ಗ್ರಹಿಕೆ ಮತ್ತು ವರ್ತನೆಗಳ ಮೇಲೆ ಪರಿಣಾಮ ಬೀರುತ್ತದೆ. ತನ್ನಷ್ಟಕ್ಕೆ ತಾನೇ ಮಗ್ನವಾಗುವುದು, ಯಾವುದರ ಪರಿವೆಯೇ ಇರದಿರುವುದು, ತುಂಟತನ, ಕೋಪ, ಮಾಡಿದ್ದನ್ನೇ ಮಾಡುವುದು ಆಟಿಸಂನ ಪ್ರಮುಖ ಲಕ್ಷಣಗಳಾಗಿದೆ. ಈ ಸಮಸ್ಯೆಯನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚುವುದು ಸವಾಲಾಗಿದೆ. ಆದ್ದರಿಂದ ಕೃತಕ ಬುದ್ಧಿಮತ್ತೆ ಆಧಾರಿತ ಕಂಪ್ಯೂಟರ್ ದೃಷ್ಟಿ ತಂತ್ರಜ್ಞಾನವನ್ನು ಬಳಸಿಕೊಂಡು ಸ್ವಯಂಚಾಲಿತವಾಗಿ ಪತ್ತೆ ಮಾಡಲಾಗುತ್ತಿದೆ.

ಕ್ಯಾಮೆರಾ ಅಳವಡಿಸಿ ನಿಗಾ: ಸಮಸ್ಯೆಗಳನ್ನು ಪತ್ತೆ ಮಾಡಲು ಸಂಶೋಧಕರು ಆಟದ ಶಿಷ್ಟಾಚಾರವನ್ನು ರೂಪಿಸಿದ್ದಾರೆ. ರಚನಾತ್ಮಕ ಹಾಗೂ ರಚನಾತ್ಮಕವಲ್ಲದ ಚಟುವಟಿಕೆಗಳನ್ನು ಈ ಆಟಗಳು ಹೊಂದಿವೆ. ರಚನಾತ್ಮಕ ಚಟುವಟಿಕೆಗಳಲ್ಲಿ ಅವರು ನಿರ್ವಹಿಸಬೇಕಾದ ಕಾರ್ಯಗಳ ಬಗ್ಗೆ ಸ್ಪಷ್ಟವಾದ ಸೂಚನೆ ನೀಡಿದರೆ, ರಚನಾತ್ಮಕವಲ್ಲದ ಚಟುವಟಿಕೆಗಳಲ್ಲಿ ಮಕ್ಕಳಿಗೆ ಯಾವುದೇ ನಿರ್ದೇಶನಗಳನ್ನು ನೀಡುವುದಿಲ್ಲ. ಕ್ಯಾಮೆರಾಗಳನ್ನು ಅಳವಡಿಸಿದ ಕೊಠಡಿಗಳಲ್ಲಿ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಮಗು, ಪೋಷಕರು ಮತ್ತು ವೈದ್ಯರ ನಡುವಿನ ಸಂವಹನವನ್ನೂ ಚಿತ್ರೀಕರಿಸಲಾಗುತ್ತದೆ. ಇದನ್ನು ಕಂಪ್ಯೂಟರ್ ದೃಷ್ಟಿಯ ಮೂಲಕ ವಿಶ್ಲೇಷಿಸಲಾಗುತ್ತದೆ.

‘ಈ ಅಧ್ಯಯನದಲ್ಲಿ ಮಕ್ಕಳ ವಿವರವನ್ನು ಗೋಪ್ಯವಾಗಿ ಇಡಲಾಗುತ್ತದೆ. ಆರಂಭಿಕ ಹಂತದಲ್ಲಿಯೇ ಸಮಸ್ಯೆ ಪತ್ತೆ ಮಾಡುವುದು ಈ ಅಧ್ಯಯನದ ಮುಖ್ಯ ಉದ್ದೇಶ. ಮಕ್ಕಳ ಮುಖದ ಹಾವಭಾವ, ಕಣ್ಣಿನ ಸಂಪರ್ಕ, ಸಾಮಾಜಿಕ ಸಂವಹನ ಸೇರಿ ವಿವಿಧ 26 ಸಿದ್ಧ ಮಾದರಿಗಳನ್ನು ಅನುಸರಿಸಿ, ಕಂಪ್ಯೂಟರ್ ದೃಷ್ಟಿ ತಂತ್ರಜ್ಞಾನವು ವಿಶ್ಲೇಷಿಸಲಿದೆ. ಪುನರಾವರ್ತಿತ ವರ್ತನೆಗಳನ್ನೂ ಗುರುತಿಸಲಾಗುತ್ತದೆ’ ಎಂದು ಸಂಶೋಧಕರು ತಿಳಿಸಿದರು.

ಆಟಿಸಂ ಸಮಸ್ಯೆಯನ್ನು ಬೇಗ ಗುರುತಿಸಿದರೆ ಪರಿಣಾಮಕಾರಿ ಚಿಕಿತ್ಸೆ ಸಾಧ್ಯ. ಆದ್ದರಿಂದ ಕಂಪ್ಯೂಟರ್ ದೃಷ್ಟಿ ತಂತ್ರಜ್ಞಾನ ಬಳಸಿಕೊಂಡು ಮಕ್ಕಳ ಮೇಲೆ ಅಧ್ಯಯನ ಕೈಗೊಳ್ಳಲಾಗಿದೆ.
–ದಿನೇಶ್ ಬಾಬು ಜಯಗೋಪಿ, ದತ್ತಾಂಶ ವಿಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಐಐಐಟಿ–ಬಿ

ಸಾಮಾನ್ಯ ಮಕ್ಕಳ ಜತೆಗೆ ಸೇರ್ಪಡೆ

ಆಟಿಸಂ ಪತ್ತೆಯ ವೇಳೆ ರೋಗ ಲಕ್ಷಣ ಹೊಂದಿರುವ ಹಾಗೂ ಹೊಂದಿರದ ಮಕ್ಕಳನ್ನು ನಿಗದಿಪಡಿಸಲಾದ ಕೊಠಡಿಯಲ್ಲಿ ಇರಿಸಿಯೂ ಅಧ್ಯಯನ ನಡೆಸಲಾಗಿದೆ. ಇದು ಅಧ್ಯಯನದ ನಿಖರತೆಯನ್ನು ತಿಳಿಯಲು ಸಹಕಾರಿಯಾಗಿದೆ. ಸಂಶೋಧಕರ ಪ್ರಕಾರ ಈಗಾಗಲೇ ನಡೆಸಲಾದ ಅಧ್ಯಯನದಲ್ಲಿ ಶೇ 82ರಷ್ಟು ನಿಖರ ಫಲಿತಾಂಶ ಸಾಧ್ಯವಾಗಿದೆ. ಮುಂದಿನ ಒಂದು ವರ್ಷ ಕಂಪ್ಯೂಟರ್ ದೃಷ್ಟಿ ತಂತ್ರಜ್ಞಾನದ ನೆರವಿನಿಂದ ಈ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸಿ ಶೇ 100ರಷ್ಟು ನಿಖರ ಫಲಿತಾಂಶ ಹೊಂದುವ ಗುರಿಯನ್ನು ಸಂಶೋಧಕರು ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.