ಬೆಂಗಳೂರು: ಆಟೊ ಚಾಲಕನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಒಡಿಶಾದ ಮೂವರು ಆರೋಪಿಗಳನ್ನು ಕೆ.ಪಿ ಅಗ್ರಹಾರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಸೌರಭ್ ಬಿಸ್ವಾಲ್ (25), ಸಾಗರ್ ದಾಸ್ (24), ಸುಬ್ರಕಾಂತ್ ಭುವಿಯಾ (35) ಬಂಧಿತರು. ಕೆ.ಪಿ.ಅಗ್ರಹಾರದ ನಿವಾಸಿ ಆಟೊ ಚಾಲಕ ರೇಚಣ್ಣ (36) ಅವರನ್ನು ಮೂವರು ಆರೋಪಿಗಳು ಕೊಲೆ ಮಾಡಿ ಪರಾರಿ ಆಗಿದ್ದರು. ಓಡಿಶಾದ ಮೂವರು ಆರೋಪಿಗಳು ಕೆ.ಪಿ.ಅಗ್ರಹಾರದಲ್ಲಿ ನೆಲಸಿದ್ದರು.

ಆರೋಪಿಗಳು ಹಾಗೂ ಆಟೊ ಚಾಲಕ ರೇಚಣ್ಣ ಅವರ ಮನೆ ಅಕ್ಕಪಕ್ಕದಲ್ಲಿದ್ದವು. ಡಿ.31ರಂದು ರಾತ್ರಿ 11.30ರ ಸುಮಾರಿಗೆ ಮದ್ಯಪಾನ ಮಾಡಿದ್ದ ಆರೋಪಿಗಳು ರೇಚಣ್ಣ ಮನೆಯ ಬಾಗಿಲನ್ನು ತಟ್ಟಿದ್ದರು. ಆ ವೇಳೆ ರೇಚಣ್ಣ ಆಕ್ರೋಶಗೊಂಡು ಆರೋಪಿಗಳ ಜೊತೆಗೆ ಜಗಳ ತೆಗೆದಿದ್ದರು. ಜಗಳ ತಾರಕಕ್ಕೇರಿದಾಗ ಆರೋಪಿಗಳು ಚಾಕುವಿನಿಂದ ರೇಚಣ್ಣನ ಎದೆ, ಬೆನ್ನಿಗೆ ಇರಿದಿದ್ದರು. ಪರಿಣಾಮ ಗಂಭೀರವಾಗಿ ಗಾಯಗೊಂಡ ರೇಚಣ್ಣ, ಸ್ಥಳದಲ್ಲೇ ಮೃತಪಟ್ಟಿದ್ದರು. ವಿಚಾರ ತಿಳಿದ ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

ರೇಚಣ್ಣ ತಾಯಿ ಜೊತೆಗೆ ಕೆ.ಪಿ ಅಗ್ರಹಾರದಲ್ಲಿ ನೆಲಸಿದ್ದರು. ಆಟೊ ಚಲಾಯಿಸಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.