ಬೆಂಗಳೂರು: ಆಧಾರ್ ಆಧಾರಿತ ಸ್ವಯಂ ಚಾಲಿತ ಆಸ್ತಿ ವರ್ಗಾವಣೆ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.

‘ನಾಗರಿಕರು ತಮ್ಮ ಆಸ್ತಿಯ ಬಾಕಿ ಇರುವ ಖಾತೆ ವರ್ಗಾವಣೆಗಳನ್ನು ಆನ್ಲೈನ್ ಮೂಲಕ ಈ ಸ್ವಯಂ ಚಾಲಿತ ವಾಗಿ ತಿದ್ದುಪಡಿಗಳನ್ನು ಪಡೆಯ ಬಹುದು’ ಎಂದು ಹೇಳಿದ್ದಾರೆ.

ವೆಬ್ಸೈಟ್ https://bbmp eaasthi.karnataka.gov.in ಗೆ ಭೇಟಿ ನೀಡಿ, ‘ಪ್ರಮುಖ ಸೂಚನೆಗಳು’ ಅಡಿಯಲ್ಲಿ ‘ekhata Automatic Mutations - Get Your Mutation’ ಲಿಂಕ್ ಕ್ಲಿಕ್ ಮಾಡಬೇಕು. ಇಪಿಐಡಿ ಸಂಖ್ಯೆಯ ಮೂಲಕ ಬಾಕಿ ಇರುವ ಇ-ಖಾತಾ ಮ್ಯುಟೇಷನ್ ಹುಡುಕಬೇಕು. ಮಾರಾಟಗಾರರು/ನೀಡುವವರು ಮತ್ತು ಖರೀದಿದಾರರು/ ಸ್ವೀಕರಿಸುವವರ ಆಧಾರ್ ಇ-ಕೆವೈಸಿ ದೃಢೀಕರಣ ಮಾಡ ಬೇಕು. ಮಾರಾಟಗಾರರು/ನೀಡುವವರ ಆಧಾರ್, ಇ-ಖಾತೆ ಹೊಂದಿರುವ ಮಾಲೀಕರ ಆಧಾರ್ನೊಂದಿಗೆ ಹೆಸರಿನೊಂದಿಗೆ ಹೊಂದಾಣಿಕೆ ಯಾದರೆ, ಏಳು ದಿನಗಳ ಆಕ್ಷೇಪಣಾ ಅವಧಿ ನಂತರ ವಿವಾದರಹಿತ ಮ್ಯುಟೇಷನ್ ಸ್ವಯಂಚಾಲಿತವಾಗಿ ಅನುಮೋದನೆಗೊಳ್ಳುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.