ಬೆಂಗಳೂರು: ಮತದಾರರನ್ನು ಮತಗಟ್ಟೆಯತ್ತ ಸೆಳೆಯುವ ಜಾಗೃತಿ ಕಾರ್ಯಕ್ರಮದ ಭಾಗವಾಗಿ ಲೈಂಗಿಕ ಅಲ್ಪಸಂಖ್ಯಾತ ಕಲಾವಿದರ ತಂಡದಿಂದ ಗೋಡೆ ಚಿತ್ರಗಳನ್ನು ಬಿಡಿಸುವ ಕಾರ್ಯವನ್ನು ಚುನಾವಣಾ ಆಯೋಗ ಮಾಡಿದೆ.

ಲಿಂಗತ್ವ ಅಲ್ಪಸಂಖ್ಯಾತ ಕಲಾವಿದರಾದ ‘ಅರವಾಣಿ ಆರ್ಟ್ ಪ್ರಾಜೆಕ್ಟ್’ ತಂಡವು ಶೇಷಾದ್ರಿ ರಸ್ತೆಯಲ್ಲಿರುವ ಮುಖ್ಯಚುನಾವಣಾಧಿಕಾರಿ ಕಚೇರಿ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ 3 ಮಹಡಿ ಕಟ್ಟಡದ ಗೋಡೆಗಳ ಮೇಲೆ ಕಣ್ಮನ ಸೆಳೆಯುವ ಚಿತ್ತಾರಗಳನ್ನು ಮೂಡಿಸಿದೆ.

ಮತದಾನದ ಮಹತ್ವ, ಯುವಕರು, ಮಹಿಳೆಯರು ಸೇರಿ ಸಮಾಜದ ಎಲ್ಲರ ಸಹಭಾಗಿತ್ವ ಸಾರುವ ವೈಶಿಷ್ಟ್ಯಪೂರ್ಣ ವರ್ಣಚಿತ್ರಗಳನ್ನು ಚಿತ್ತಾಕರ್ಷಕವಾಗಿ ಕಲಾವಿದರು ಚಿತ್ರಿಸಿದ್ದಾರೆ.

ಲೈಂಗಿಕ ಅಲ್ಪಸಂಖ್ಯಾತ ಸಮುದಾಯವನ್ನು ಸಶಕ್ತಗೊಳಿಸುವ ಆಶಯದೊಂದಿಗೆ ‘ಅರವಾಣಿ ಆರ್ಟ್ ಪ್ರಾಜೆಕ್ಟ್’ ಸಂಸ್ಥೆ ಹುಟ್ಟಿಕೊಂಡಿದೆ. ಈ ಸಮುದಾಯದವಲ್ಲಿ ಇರುವ ಕೀಳರಿಮೆ ತೊಡೆದು ಪ್ರತಿಭೆಯನ್ನು ಪ್ರೋತ್ಸಾಹಿಸಿ ಸಮಾಜದಲ್ಲಿ ಗುರುತಿಸಿಕೊಳ್ಳಲು ನೆರವಾಗುತ್ತಿದೆ. ಈ ಸಂಸ್ಥೆಯ ಕಲಾವಿದರು ಬೆಂಗಳೂರು, ಮುಂಬೈ, ಚೆನ್ನೈ, ಹೈದರಾಬಾದ್, ಕೋಲ್ಕತ್ತ ಸೇರಿ ಪ್ರಮುಖ ನಗರಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಮೆಟ್ರೊ ಪಿಲ್ಲರ್ಗಳು, ಸರ್ಕಾರಿ ಕಚೇರಿ ಗೋಡೆಗಳು ಸೇರಿ ಜನನಿಬಿಡ ಪ್ರದೇಶಗಳಲ್ಲಿ ಮತದಾನದ ಮಹತ್ವ ಸಾರುವ ಕಲಾಕೃತಿಗಳನ್ನು ರಚಿಸಲು ಈ ತಂಡಕ್ಕೆ ಮತ್ತೊಂದು ಅವಕಾಶವನ್ನು ಮುಖ್ಯ ಚುನಾವಣಾಧಿಕಾರಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.