ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೇಖಕಿ ಬಾ.ಹ. ರಮಾಕುಮಾರಿಗೆ ಅನುಪಮಾ ನಿರಂಜನ ಪ್ರಶಸ್ತಿ

Published 9 ಮೇ 2024, 15:18 IST
Last Updated 9 ಮೇ 2024, 15:18 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಸಂಘರ್ಷ ಸಮಿತಿ ನೀಡುವ ಅನುಪಮಾ ನಿರಂಜನ ಪ್ರಶಸ್ತಿಗೆ ಲೇಖಕಿ ಬಾ.ಹ. ರಮಾಕುಮಾರಿ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು ₹5,000 ನಗದು, ಪ್ರಶಸ್ತಿ ಪತ್ರ ಹಾಗೂ ಫಲಕ ಒಳಗೊಂಡಿದೆ.

ಅನುಪಮಾ ನಿರಂಜನ ಜನ್ಮ ದಿನದ ಅಂಗವಾಗಿ ಏರ್ಪಡಿಸಿದ್ದ ರಾಜ್ಯಮಟ್ಟದ ಮಹಿಳಾ ಕಥಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಂಗಳೂರು ಕೊಳಚಪ್ಪುವಿನ ಬಿ.ಸತ್ಯವತಿ ಭಟ್ ಪ್ರಥಮ, ಹೊಸಕೋಟೆಯ ಗಾಯತ್ರಿ ಕುಲಕರ್ಣಿ ದ್ವಿತೀಯ ಹಾಗೂ ಮಡಿಕೇರಿಯ ರಾಧಿಕಾ ವಿಶ್ವನಾಥ್‌ ತೃತೀಯ ಸ್ಥಾನ ಪಡೆದಿದ್ದಾರೆ. ಬಹುಮಾನಗಳು ಕ್ರಮವಾಗಿ ₹2,500, ₹2,000 ಮತ್ತು ₹1,500 ನಗದು ಒಳಗೊಂಡಿದೆ. 

ಎನ್.ಆರ್. ಕಾಲೊನಿಯಲ್ಲಿರುವ ಬಿಎಂಶ್ರೀ ಕಲಾಭವನದಲ್ಲಿ ಮೇ 17ರಂದು ಸಂಜೆ 5ಕ್ಕೆ ನಡೆಯಲಿರುವ ಅನುಪಮಾ ನಿರಂಜನ ಅವರ ಜನ್ಮದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಹಾಗೂ ಬಹುಮಾನ ವಿತರಣೆ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಎ.ಎಸ್.‌ನಾಗರಾಜಸ್ವಾಮಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT