ಬೆಂಗಳೂರು: ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕನಕಪುರ ಮುಖ್ಯರಸ್ತೆಯಲ್ಲಿರುವ ಬನಶಂಕರಿ ಅಮ್ಮನವರ ಬ್ರಹ್ಮ ರಥೋತ್ಸವವು ಜ.3ರಂದು ನಡೆಯಲಿದ್ದು, ಸಂಚಾರ ಮಾರ್ಪಾಡು ಮಾಡಲಾಗಿದೆ ಎಂದು ಬೆಂಗಳೂರು ನಗರ ಸಂಚಾರ ದಕ್ಷಿಣ ವಿಭಾಗದ ಡಿಸಿಪಿ ತಿಳಿಸಿದ್ದಾರೆ.

ವಾಹನ ಸಂಚಾರ ನಿರ್ಬಂಧಿಸಿರುವ ರಸ್ತೆ: ಕನಕಪುರ ಮುಖ್ಯರಸ್ತೆ ಬನಶಂಕರಿ ದೇವಸ್ಥಾನದಿಂದ ಸಾರಕ್ಕಿ ಮಾರುಕಟ್ಟೆ ಜಂಕ್ಷನ್ ವರೆಗೆ.

ನಿರ್ಬಂಧಿಸಲಾದ ಸಂಚಾರಕ್ಕೆ ಬದಲಿ ಮಾರ್ಗಗಳು: ಕನಕಪುರ ಮುಖ್ಯರಸ್ತೆ ಕೋಣನಕುಂಟೆ ಕಡೆಯಿಂದ ಬನಶಂಕರಿ ಬಸ್ ನಿಲ್ದಾಣದ ಕಡೆಗೆ ಹೋಗುವ ವಾಹನಗಳು ಜೆ.ಪಿ.ನಗರ ಮೆಟ್ರೊ ಜಂಕ್ಷನ್ (ಸಾರಕ್ಕಿ ಸಿಗ್ನಲ್) ಹತ್ತಿರ ಬಲ ತಿರುವು ಪಡೆದು ಸಿಂಧೂರ ವೃತ್ತದ ಮೂಲಕ ರಾಜಲಕ್ಷ್ಮಿ ಮಾರ್ಗವಾಗಿ ಸಂಚರಿಸಬಹುದು.

ಬನಶಂಕರಿ ಬಸ್ ನಿಲ್ದಾಣದ ಕಡೆಯಿಂದ ಸಾರಕ್ಕಿ ಸಿಗ್ನಲ್ ಕಡೆ ಸಂಚರಿಸುವ ವಾಹನಗಳು ಬನಶಂಕರಿ ಬಸ್ ನಿಲ್ದಾಣದ ಹತ್ತಿರ ಬಲಕ್ಕೆ ತಿರುವು ಪಡೆದು ಯಾರಬ್ ನಗರದ ಮೂಲಕ ಕೆ.ಎಸ್.ಲೇಔಟ್ ಜಂಕ್ಷನ್ನಲ್ಲಿ ಎಡಕ್ಕೆ ತಿರುವು ಪಡೆದು ಇಲಿಯಾಸ್ ನಗರ-ಸಾರಕ್ಕಿ ತಲುಪಿ ಅಲ್ಲಿಂದ ಬೇರೆಡೆಗೆ ತೆರಳಬಹುದು ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.