ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಆಟೊ ಪ್ರಯಾಣದ ಪರಿಷ್ಕೃತ ದರ ಜಾರಿಗೂ ಮುನ್ನವೇ ಕೆಲವು ಆ್ಯಪ್ ಆಧಾರಿತ ಆಟೊಗಳು ಈಗಿನಿಂದಲೇ ಹೊಸ ದರವನ್ನು ವಸೂಲಿ ಮಾಡುತ್ತಿವೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

ನಗರ ಜಿಲ್ಲಾಡಳಿತವು ಜುಲೈ 14ರಂದು ಆಟೊ ಪ್ರಯಾಣ ದರ ಹೆಚ್ಚಳ ಮಾಡಿದ್ದು, ಪರಿಷ್ಕೃತ ದರ ಆಗಸ್ಟ್ 1ರಿಂದ ಜಾರಿಗೆ ಬರಲಿದೆ. ಮೊದಲ ಎರಡು ಕಿ.ಮೀ.ಗೆ ಕನಿಷ್ಠ ₹30 ಇದ್ದ ದರವನ್ನು ₹36ಕ್ಕೆ ಏರಿಸಿದೆ. ಬಳಿಕ ಪ್ರತಿ ಕಿಲೋಮೀಟರ್ಗೆ ₹15 ಇದ್ದಿದ್ದು ₹18ಕ್ಕೆ ಏರಿದೆ. ಆಟೊದಲ್ಲಿ ಮೂವರು ಅಷ್ಟೇ ಪ್ರಯಾಣಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

‘ಅನೇಕ ಚಾಲಕರು ಮೀಟರ್ ಬಳಸುವುದಿಲ್ಲ ಮತ್ತು ಹೆಚ್ಚಿನ ದರ ಕೇಳುತ್ತಾರೆ. ಬೈಕ್ ಟ್ಯಾಕ್ಸಿ ನಿಷೇಧದ ನಂತರ ದರ ಮತ್ತಷ್ಟು ಹೆಚ್ಚಾಗಿದೆ. ರ್ಯಾಪಿಡೊ, ಓಲಾ ಮುಂತಾದ ಆ್ಯಪ್ಗಳಲ್ಲಿ ವಿಪರೀತ ಪ್ರಯಾಣ ದರ ತೆಗೆದುಕೊಳ್ಳುತ್ತಿದ್ದು, ದರದಲ್ಲಿ ಪಾರದರ್ಶಕತೆ ಇಲ್ಲ. ಹೊಸ ದರವನ್ನು ಈಗಿನಿಂದಲೇ ವಸೂಲು ಮಾಡಲಾಗುತ್ತಿದೆ. ಪ್ರಯಾಣ ದರಕ್ಕೆ ಸಂಬಂಧಿಸಿದಂತೆ ಆ್ಯಪ್ನಲ್ಲಿ ಸ್ಪಷ್ಟವಾದ ಮಾಹಿತಿ ನೀಡುತ್ತಿಲ್ಲ’ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

‘ಆ್ಯಪ್ ಆಧಾರಿತ ಆಟೊಗಳು ನಿಗದಿತ ದರಕ್ಕಿಂತಲೂ ಹೆಚ್ಚು ವಸೂಲಿ ಮಾಡುತ್ತಿವೆ. ಹೆಚ್ಚಿನ ದರ ನೀಡುವಂತೆ ಬೇಡಿಕೆ ಇಡುತ್ತಾರೆ, ಪ್ರಯಾಣಿಕರು ಒಪ್ಪದೇ ಇದ್ದರೆ ಪ್ರಯಾಣ ರದ್ದುಗೊಳಿಸುತ್ತಾರೆ. ಇದರಿಂದ ತೊಂದರೆ ಅನುಭವಿಸುವಂತಾಗಿದೆ’ ಎಂದು ಪ್ರಯಾಣಿಕ ಸಿದ್ದಲಿಂಗ ಕುಮಾರ್ ಬೇಸರ ವ್ಯಕ್ತಪಡಿಸಿದರು.

‘ಇತ್ತೀಚೆಗೆ ನನ್ನ ಮನೆಯ ಸಮೀಪದಲ್ಲಿರುವ ಬಡಾವಣೆಗೆ ಆಟೊದಲ್ಲಿ ಪ್ರಯಾಣಿಸಿದಾಗ ₹100 ತೆಗೆದುಕೊಂಡರು. ಯಾವ ಆಧಾರದಲ್ಲಿ ಲೆಕ್ಕ ಹಾಕಿ ದರ ನಿಗದಿ ಪಡಿಸಿದ್ದಾರೆ ಎಂಬುದು ಗೊತ್ತಿಲ್ಲ. ಚಾಲಕನನ್ನು ಕೇಳಿದರೆ ಸ್ಪಷ್ಟವಾದ ಉತ್ತರ ನೀಡಲಿಲ್ಲ’ ಎಂದು ಹೇಳಿದರು.

‘ಪ್ರಯಾಣಿಕರು ಒಟಿಪಿ ಹೇಳಿದ ಮೇಲೆ ಸಂಚಾರ ಆರಂಭಿಸಿ ಅವರು ತಲುಪಬೇಕಾದ ಸ್ಥಳಕ್ಕೆ ಮುಟ್ಟಿಸುತ್ತೇವೆ. ಎಷ್ಟು ದರ ಎಂಬುದು ಆ್ಯಪ್ನಲ್ಲಿ ಪ್ರಯಾಣಿಕರಿಗೆ ಮೊದಲೇ ತೋರಿಸಿರುತ್ತದೆ. ಸ್ಕ್ಯಾನ್ ಮಾಡಿ ಪಾವತಿ ಮಾಡುತ್ತಾರೆ. ನಾವು ಹೆಚ್ಚುವರಿಯಾಗಿ ಹಣ ಕೇಳುವುದಿಲ್ಲ’ ಎಂದು ಆಟೊ ಚಾಲಕರೊಬ್ಬರು ತಿಳಿಸಿದರು.

‘ಪ್ರಯಾಣಿಕರಿಂದ ಹೆಚ್ಚಿನ ದರ ವಸೂಲಿ ಮಾಡುತ್ತಿಲ್ಲ. ಆಗಸ್ಟ್ 1ರಿಂದ ಹೊಸ ದರ ಜಾರಿಯಾಗಲಿದೆ. ಆ್ಯಪ್ ಆಧಾರಿತ ಸೇವೆಗಳ ಆಟೊಗಳು ದಟ್ಟಣೆ ಅವಧಿಯಲ್ಲಿ ₹30ರಿಂದ ₹40ರವರೆಗೂ ಹೆಚ್ಚಿನ ದರ ತೆಗೆದುಕೊಳ್ಳುತ್ತಾರೆ; ಅದೂ ಪ್ರಯಾಣಿಕರು ಒಪ್ಪಿದರೆ ಮಾತ್ರ. ಅದನ್ನು ಹೊರತುಪಡಿಸಿ ಪ್ರಯಾಣಿಕರಿಂದ ಹಣ ಸುಲಿಗೆ ಮಾಡುತ್ತಿಲ್ಲ’ ಎಂದು ಆಟೊ ಚಾಲಕ ರಾಮೇಗೌಡ ‘ಪ್ರಜಾವಾಣಿ‘ಗೆ ತಿಳಿಸಿದರು.

ಆಟೊಗಳ ಮುಟ್ಟುಗೋಲು

ಅಧಿಕ ದರ ವಸೂಲಿ ಮಾಡುತ್ತಿರುವ ಬಗ್ಗೆ ಪ್ರಯಾಣಿಕರಿಂದ ದೂರುಗಳು ಬಂದ ಕಾರಣ ಕೆಲ ದಿನಗಳ ಹಿಂದೆ ಸಾರಿಗೆ ಕಚೇರಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಒಂದೇ ದಿನ 299 ಪ್ರಕರಣಗಳನ್ನು ದಾಖಲಿಸಿ 114 ಆಟೊಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಬೆಂಗಳೂರು ಕೇಂದ್ರ ಬೆಂಗಳೂರು ಪಶ್ಚಿಮ ಬೆಂಗಳೂರು ಪೂರ್ವ ಬೆಂಗಳೂರು ಉತ್ತರ ಬೆಂಗಳೂರು ದಕ್ಷಿಣ ಜ್ಞಾನಭಾರತಿ ದೇವನಹಳ್ಳಿ ಯಲಹಂಕ ಎಲೆಕ್ಟ್ರಾನಿಕ್ ಸಿಟಿ ಕೆ.ಆರ್. ಪುರ ಚಂದಾಪುರ ನೆಲಮಂಗಲ ರಾಮನಗರ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.