ಬುಧವಾರ, ನವೆಂಬರ್ 30, 2022
17 °C

ವಚನಗಳು: ಎಚ್.ಎಸ್. ಶಿವಪ್ರಕಾಶ್ ಉಪನ್ಯಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದೊಮ್ಮಲೂರಿನಲ್ಲಿರುವ ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್ (ಬಿಐಸಿ) ತನ್ನ ಕೇಂದ್ರದಲ್ಲಿ ಭಾರತೀಯ ಭಕ್ತಿ ಮತ್ತು ಸಿದ್ಧ ಸಂಪ್ರದಾಯಗಳ ಸಂದರ್ಭದಲ್ಲಿ ವಚನಗಳ ಪಾತ್ರದ ಬಗ್ಗೆ ಕವಿ ಎಚ್.ಎಸ್. ಶಿವಪ್ರಕಾಶ್ ಅವರಿಂದ ಸರಣಿ ಉಪನ್ಯಾಸ ಹಮ್ಮಿಕೊಂಡಿದೆ. 

‘ವಚನಗಳಲ್ಲಿ ಹಸ್ತ, ಹೃದಯ ಹಾಗೂ ಶೂನ್ಯ ಸಂಪಾದನೆಯ ಪಥಗಳು’ (ದಿ ಪಾಥ್ಸ್ ಆಫ್ ದಿ ಹ್ಯಾಂಡ್, ಹಾರ್ಟ್ ಆ್ಯಂಡ್ ವಾಯ್ಡ್) ಶೀರ್ಷಿಕೆಯಡಿ ಹಮ್ಮಿಕೊಂಡಿರುವ ಈ ಉಪನ್ಯಾಸ ಸರಣಿಗೆ ಬುಧವಾರ ಸಂಜೆ 6.30ಕ್ಕೆ ಚಾಲನೆ ಸಿಗಲಿದೆ. ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಂದರ್ಭದಲ್ಲಿ ವಚನಗಳ ಪ್ರಸ್ತುತತೆ ಬಗ್ಗೆ ಪ್ರಥಮ ಉಪನ್ಯಾಸ ಕೇಂದ್ರೀಕೃತವಾಗಿದೆ.

ಇದೇ 25ಕ್ಕೆ ಎರಡನೇ ಉಪನ್ಯಾಸ ಹಮ್ಮಿಕೊಳ್ಳಲಾಗಿದ್ದು,‌ ವಚನಕಾರರ ಕೊಡುಗೆಗಳ ಕಡೆಗಣನೆ ಹಾಗೂ ವಚನ ವೈವಿಧ್ಯದ ಬಗ್ಗೆ ಬೆಳಕು ಚೆಲ್ಲಲಾಗುತ್ತದೆ. ಆ.6ರಂದು ಮೂರನೇ ಉಪನ್ಯಾಸ ಏರ್ಪಡಿಸಲಾಗಿದೆ. ‌ಭಕ್ತಿ ಚಳವಳಿ ಮತ್ತು ವಚನ ಚಳವಳಿ ನಡುವಿನ ಹೋಲಿಕೆ ಹಾಗೂ ಭಿನ್ನತೆ ಬಗ್ಗೆ ಅದರಲ್ಲಿ ತಿಳಿಸಲಾಗುತ್ತದೆ. ಆ.7ರಂದು ಕೊನೆಯ ಉಪನ್ಯಾಸ ನಡೆಯಲಿದ್ದು, ವಚನಕಾರರಲ್ಲಿನ ತತ್ವಶಾಸ್ತ್ರ ಹಾಗೂ ಕಾವ್ಯದ ವಿಷಯದಲ್ಲಿ ಸಿದ್ಧ ಮತ್ತು ನಿರ್ಗುಣ ಕವಿಗಳನ್ನು ತೌಲನಿಕವಾಗಿ ಚರ್ಚಿಸಲಾಗುತ್ತದೆ. 

ವಚನಗಳನ್ನು ಹೊಸ ಆಯಾಮದಿಂದ ನೋಡುವ ಪ್ರಯತ್ನ ಇದಾಗಿದೆ. ಎಲ್ಲ ಉಪನ್ಯಾಸಗಳು ಸಂಜೆ 6.30ರಿಂದ ಪ್ರಾರಂಭವಾಗಲಿವೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು