ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿನ ಏಳು ಬಿ.ಇಡಿ. ಕಾಲೇಜುಗಳಿದ್ದ ನೀಡಿದ್ದ ಮಾನ್ಯತೆಯನ್ನು ಎನ್‌ಸಿಟಿಇ ವಾಪಸ್ ಪಡೆದಿದೆ.
ಹೀಗಾಗಿ, ಈ ಕಾಲೇಜುಗಳಲ್ಲಿ ಬಿ.ಇಡಿ. ಪದವಿಗೆ ಪ್ರವೇಶ ಪಡೆಯಬಾರದು. ಪ್ರವೇಶ ಪಡೆದರೆ ವಿಶ್ವವಿದ್ಯಾಲಯವು ಜವಾಬ್ದಾರಿ ಅಲ್ಲ ಎಂದು ಕುಲಸಚಿವರು ತಿಳಿಸಿದ್ದಾರೆ.
ಮಾನ್ಯತೆ ಪಡೆಯದ ಕಾಲೇಜುಗಳು: ಮಾರಗೊಂಡನಹಳ್ಳಿಯ ಸೇಂಟ್ ಸ್ಟೀಫನ್ಸ್ ಟೀಚರ್ಸ್ ಕಾಲೇಜು, ಜೆ.ಪಿ. ನಗರದ ಜಂಬೂಸವಾರಿ ದಿಣ್ಣೆಯ ಜಿ.ಕೆ.ಎಂ. ಬಿ.ಇಡಿ. ಕಾಲೇಜು, ಚಿಕ್ಕಬಾಣಾವರದ ಪ್ರಗತಿ ಕಾಲೇಜ್ ಆಫ್ ಎಜುಕೇಷನ್, ನೇತಾಜಿ ಕಾಲೇಜ್ ಆಫ್ ಎಜುಕೇಷನ್, ಮಹಾಲಕ್ಷ್ಮೀಪುರದ ಆಮಿತ ಬಿ.ಇಡಿ, ಕಾಲೇಜು, ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ, ಅರಿಶಿನಕುಂಟೆ ಜಿ.ಎಂ. ಶಿಕ್ಷಣ ಕಾಲೇಜು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.