ಬೆಂಗಳೂರು: ‘ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಪರಿಸರ ಸೂಕ್ಷ್ಮ ವಲಯದ(ಇಎಸ್ಝಡ್) ಅಧಿಸೂಚನೆಗೂ ಮುನ್ನಾ ಹಾಗೂ ಆ ನಂತರ ನಿರ್ಮಾಣವಾಗಿರುವ ಬಡಾವಣೆ, ರೆಸಾರ್ಟ್ ಸಹಿತ ವಾಣಿಜ್ಯ ಚಟುವಟಿಕೆಗಳು, ಆನೆ ಕಾರಿಡಾರ್ಗೆ ಅಡ್ಡಿಯಾಗುತ್ತಿರುವ ವಸ್ತುಸ್ಥಿತಿ ಮಾಹಿತಿ ಪಡೆದು ಸುಪ್ರೀಂ ಕೋರ್ಟ್ಗೆ ವರದಿ ಸಲ್ಲಿಸಲಾಗುವುದು’ ಎಂದು ಕೇಂದ್ರ ಉನ್ನತಾಧಿಕಾರ ಸಮಿತಿ(ಸಿಇಸಿ) ಸದಸ್ಯ ಚಂದ್ರಪ್ರಕಾಶ್ ಗೋಯಲ್ ತಿಳಿಸಿದರು.

ಇಎಸ್ಝಡ್ ಅಂತಿಮ ಅಧಿಸೂಚನೆ ಪ್ರಶ್ನಿಸಿ ನಗರದ ಬೆಳ್ಳಿಯಪ್ಪ ಹಾಗೂ ಶಶಿಧರ್ ಅವರು 2025ರ ಮೇ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್ನಲ್ಲಿ ದಾವೆ ಹೂಡಿರುವ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ಭಾಗಕ್ಕೆ ಶುಕ್ರವಾರ ಗೋಯಲ್ ಭೇಟಿ ನೀಡಿದ್ದರು. ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬನ್ನೇರುಘಟ್ಟ ಭಾಗದ ರಾಗಿಹಳ್ಳಿ, ತೇರುಬೀದಿ ಶಿವನಹಳ್ಳಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಕ್ಕೂ ತೆರಳಿ ಮಾಹಿತಿ ಪಡೆದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಭಾಗದಲ್ಲಿರುವ ಆನೆಗಳ ಮೂರು ಕಾರಿಡಾರ್ ಹಾಳಾಗಿವೆ. ಅಲ್ಲದೇ ವನ್ಯಜೀವಿಗಳ ಸಹಜ ಸಂಚಾರಕ್ಕೆ ಅಡ್ಡಿಯಾಗಿದೆ ಎನ್ನುವ ಅಂಶವನ್ನು ದಾವೆಯಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ವನ್ಯಜೀವಿ ಮಾನವ ಸಂಘರ್ಷ ಪ್ರಮಾಣ ಹೆಚ್ಚಳವಾಗಿರುವ ಮಾಹಿತಿಯನ್ನು ಪಡೆಯುವೆ. ಕರ್ನಾಟಕ ಗೃಹ ಮಂಡಳಿ ನಿರ್ಮಿಸುತ್ತಿರುವ ಬಡಾವಣೆ ಮತ್ತಿತರರ ಚಟುವಟಿಕೆಗಳನ್ನೂ ಗಮನಿಸುವೆ. ಜನವರಿ 7ರಂದು ಸುಪ್ರೀಂಕೋರ್ಟ್ನಲ್ಲಿ ಅರ್ಜಿ ವಿಚಾರಣೆಗೆ ಬರುವುದರಿಂದ ಅದಕ್ಕಿಂತ ಮೊದಲು ವರದಿಯನ್ನು ಸಿಇಸಿ ಅಧ್ಯಕ್ಷರಿಗೆ ಸಲ್ಲಿಸುವೆ’ ಎಂದು ಹೇಳಿದರು.

‘ರಾಷ್ಟ್ರೀಯ ಉದ್ಯಾನಗಳ ಪರಿಸರ ಸೂಕ್ಷ್ಮ ವಲಯದಲ್ಲಿ ಯಾವುದೇ ರೀತಿ ಗಣಿಗಾರಿಕೆ, ಕಲ್ಲುಕ್ವಾರಿ ನಡೆಸಬಾರದು. ಅದನ್ನು ಅರಣ್ಯವಾಗಿಯೇ ಉಳಿಸಿಕೊಳ್ಳಬೇಕು ಎನ್ನುವ ಮಾರ್ಗಸೂಚಿಯನ್ನು ಈಗಾಗಲೇ ನೀಡಲಾಗಿದೆ. ರಾಜ್ಯ ಸರ್ಕಾರದ ಸಂಬಂಧಪಟ್ಟ ಇಲಾಖೆಗಳು ಇದನ್ನು ನಿಯಂತ್ರಿಸಬೇಕು’ ಎಂದರು.

‘ಬನ್ನೇರುಘಟ್ಟವು ಬೆಂಗಳೂರು ನಗರಕ್ಕೆ ಹೊಂದಿಕೊಂಡಂತೆ ಇರುವ ಪ್ರಮುಖ ಅರಣ್ಯ ಪ್ರದೇಶ. ಉದ್ಯಾನದ ವ್ಯಾಪ್ತಿ 268.8 ಚದರ ಕಿ.ಮೀ. ಎಂದು ಗುರುತಿಸಲಾಗಿದೆ. ಇದರಲ್ಲಿ 100 ಮೀಟರ್ನಿಂದ 4.5 ಕಿ.ಮೀ. ವ್ಯಾಪ್ತಿಯನ್ನು ಪರಿಸರ ಸೂಕ್ಷ್ಮ ವಲಯವಾಗಿ ಘೋಷಿಸಲಾಗಿತ್ತು. ಆ ನಂತರ 2018ರಲ್ಲಿ ಇದನ್ನು ಬದಲಾಯಿಸಿ 100 ಮೀಟರ್ನಿಂದ 1 ಕಿ.ಮೀ. ವ್ಯಾಪ್ತಿಗೆ ಸೀಮಿತಗೊಳಿಸಲಾಯಿತು. 2020ರಲ್ಲಿ ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವಾಲಯ ಅಂತಿಮ ಅಧಿಸೂಚನೆ ಜಾರಿಗೊಳಿಸಿದಾಗ ಉದ್ಯಾನದ ವ್ಯಾಪ್ತಿ 168.84 ಚದರ ಕಿ.ಮೀ.ಗೆ ಸೀಮಿತಗೊಳಿಸಲಾಯಿತು. ಇದರಿಂದ ಸುಮಾರು 100 ಚದರ ಕಿ.ಮೀ.ಗೆ ಸೂಕ್ಷ್ಮ ವಲಯ ಕಡಿಮೆಯಾಗಿರುವುದನ್ನು ದೂರುದಾರರು ತಿಳಿಸಿದ್ದಾರೆ. ಈ ಎಲ್ಲಾ ಅಂಶದ ಕುರಿತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡಿರುವೆ’ ಎಂದರು.

ರೈತರಿಂದಲೂ ಅಹವಾಲು ಸಲ್ಲಿಕೆ

ರೈತರಾದ ಕಾಡುಬೆಟ್ಟನಹಳ್ಳಿಯ ಶಿವಕುಮಾರ್ ಲಿಂಗಪ್ಪ ಸೋಮಶೇಖರ್ ಅಹವಾಲು ಸಲ್ಲಿಸಿ ಹಲವಾರು ವರ್ಷಗಳಿಂದ ಬನ್ನೇರುಘಟ್ಟ ಭಾಗದಲ್ಲಿ ಬದುಕು ಕಟ್ಟಿಕೊಂಡಿದ್ದೇವೆ. ಪರಿಸರ ಸೂಕ್ಷ್ಮ ವಲಯ ಹೆಸರಲ್ಲಿ ನಮಗೆ ತೊಂದರೆ ನೀಡಲಾಗುತ್ತಿದೆ. ಕರ್ನಾಟಕ ಗೃಹ ಮಂಡಳಿ ಬಡಾವಣೆ ನಿರ್ಮಿಸಲು ನಮ್ಮನ್ನು ಒಕ್ಕಲೆಬ್ಬಿಸಲಾಗಿದೆ. ಜನಪ್ರತಿನಿಧಿಗಳು ಗಣ್ಯರು ಭೂಮಿ ಒತ್ತುವರಿ ಮಾಡಿಕೊಂಡಿದ್ದರೂ ಅವರ ವಿರುದ್ದ ಕ್ರಮ ಕೈಗೊಳ್ಳುತ್ತಿಲ್ಲ. ಇದನ್ನು ಸಮಿತಿ ಗಮನಹರಿಸಬೇಕು’ ಎಂದು ಮನವಿ ಮಾಡಿದರು. ದೂರುದಾರರ ಪರ ವಕೀಲ ಮೈತ್ರೇಯ ಘೋರ್ಪಡೆ ಬನ್ನೇರುಘಟ್ಟ ನೇಚರ್ ಕನ್ಸರ್ವೇಷನ್ ಟ್ರಸ್ಟ್ನ ಕಿರಣ್ ಅರಸ್ ಕೀರ್ತನ್ ರೆಡ್ಡಿ ಮತ್ತಿತರರು ‘ಅಂತಿಮ ಅಧಿಸೂಚನೆ ಹೊರಡಿಸಿದ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯೊಳಗೂ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿವೆ. ಇದನ್ನೂ ಸಮಿತಿ ಗಂಭೀರವಾಗಿ ಪರಿಗಣಿಸಬೇಕು. ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಪರಿಸರ ಮಹತ್ವ ಆಧರಿಸಿ ಸೂಕ್ಷ್ಮ ಪ್ರದೇಶವನ್ನು 10.ಕಿ.ಮೀ ವ್ಯಾಪ್ತಿಗೂ ವಿಸ್ತರಿಸಲು ಅವಕಾಶ ಇರುವುದರಿಂದ ಇದನ್ನು ಬನ್ನೇರಘಟ್ಟ ಪ್ರದೇಶಕ್ಕೂ ಅನ್ವಯಿಸಬೇಕು’ ಎಂದು ಸಮಿತಿಗೆ ದಾಖಲೆ ಒದಗಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.