ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲೆಕಾಯಿ ಪರಿಷೆ: ದಟ್ಟಣೆ ತಗ್ಗಿಸಲು ಮಾರ್ಗ ಬದಲಾವಣೆ

Published 7 ಡಿಸೆಂಬರ್ 2023, 16:30 IST
Last Updated 7 ಡಿಸೆಂಬರ್ 2023, 16:30 IST
ಅಕ್ಷರ ಗಾತ್ರ

ಬೆಂಗಳೂರು: ಬಸವನಗುಡಿ ಕಡಲೆಕಾಯಿ ಪರಿಷೆ ಅಂಗವಾಗಿ ಡಿ. 9ರಿಂದ 13ರವರೆಗೆ ವಾಹನಗಳ ದಟ್ಟಣೆ ನಿಯಂತ್ರಿಸಲು ಸಂಚಾರದಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ.

‘ದೊಡ್ಡ ಬಸವಣ್ಣ ಹಾಗೂ ದೊಡ್ಡ ಗಣಪತಿ ದೇವಸ್ಥಾನ ರಸ್ತೆಯಲ್ಲಿ ಪರಿಷೆ ಜರುಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಪರಿಷೆಗೆ ಬರುವ ನಿರೀಕ್ಷೆ ಇದೆ. ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗ ಕಲ್ಪಿಸಲಾಗಿದೆ’ ಎಂದು ಸಂಚಾರ ವಿಭಾಗದ ಜಂಟಿ ಕಮಿಷನರ್ ಎಂ.ಎನ್. ಅನುಚೇತ್ ತಿಳಿಸಿದ್ದಾರೆ.

‘ಎನ್‌.ಆರ್. ಕಾಲೊನಿಯ ಎಪಿಎಸ್ ಕಾಲೇಜು ಆಟದ ಮೈದಾನ, ರಾಮಕೃಷ್ಣ ಆಶ್ರಮ ಜಂಕ್ಷನ್ ಬಳಿಯ ಕೊಹಿನೂರು ಆಟದ ಮೈದಾನ ಹಾಗೂ ಉದಯಭಾನು ಆಟದ ಮೈದಾನದಲ್ಲಿ ವಾಹನಗಳನ್ನು ನಿಲ್ಲಿಸಲು ವ್ಯವಸ್ಥೆ ಮಾಡಲಾಗಿದೆ’ ಎಂದಿದ್ದಾರೆ.

ಎಲ್ಲೆಲ್ಲಿ ಮಾರ್ಗ ಬದಲಾವಣೆ

* ಚಾಮರಾಜಪೇಟೆ ಹಾಗೂ ಗಾಂಧಿ ಬಜಾರ್ ಮುಖ್ಯರಸ್ತೆಯಿಂದ ಹನುಮಂತನಗರ ಕಡೆ ಹೋಗುವ ವಾಹನಗಳು, ರಾಮಕೃಷ್ಣ ಆಶ್ರಮದ ಬಲ ತಿರುವಿನಲ್ಲಿ ಸಾಗಿ ಹಯವದನ ರಾವ್ ರಸ್ತೆ, ಗವಿಪುರ ರಸ್ತೆ ಹಾಗೂ ಮೌಂಟ್ ಜಾಯ್ ರಸ್ತೆ ಮೂಲಕ ಸಾಗಬಹುದು

* ಆರ್‌.ವಿ. ಅಧ್ಯಾಪಕರ ಕಾಲೇಜು ಜಂಕ್ಷನ್‌ ಕಡೆಯಿಂದ ಬರುವ ವಾಹನಗಳು ಠ್ಯಾಗೋರ್ ವೃತ್ತದ ಬಲ ತಿರುವಿನಲ್ಲಿ ಸಾಗಿ, ಗಾಂಧಿ ಬಜಾರ್ ಮುಖ್ಯರಸ್ತೆ, ರಾಮಕೃಷ್ಣ ಆಶ್ರಮ ಜಂಕ್ಷನ್, ಹಯವದನ ರಾವ್ ರಸ್ತೆ, ಗವಿಪುರ ರಸ್ತೆ ಹಾಗೂ ಮೌಂಟ್ ಜಾಯ್ ರಸ್ತೆ ಮೂಲಕ ಹನುಮಂತನಗರಕ್ಕೆ ಹೋಗಬಹುದು

* ತ್ಯಾಗರಾಜನಗರ ಹಾಗೂ ಬನಶಂಕರಿ ಕಡೆಯಿಂದ ಎನ್‌.ಆರ್‌. ಕಾಲೊನಿ ಮೂಲಕ ಚಾಮರಾಜಪೇಟೆಗೆ ಹೋಗುವ ವಾಹನಗಳು, ಕಾಮತ್ ಯಾತ್ರಿ ನಿವಾಸ ರಸ್ತೆಯಲ್ಲಿ ಎಡ ತಿರುವು ಪಡೆದು, ಬಿಎಂಎಸ್ ಕಾಲೇಜು ವಸತಿನಿಲಯ ರಸ್ತೆ, ಕತ್ರಿಗುಪ್ಪೆ ರಸ್ತೆ ಜಂಕ್ಷನ್, ನಾರಾಯಣಸ್ವಾಮಿ ವೃತ್ತ, ಕೆ.ಜಿ.ನಗರ ಮುಖ್ಯರಸ್ತೆ ಮೂಲಕ ಸಂಚರಿಸಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT