ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವನಗುಡಿಯಲ್ಲಿ ಕಾಮಗಾರಿ ಅರ್ಧಕ್ಕೇ ಸ್ಥಗಿತ: ಸೊಪ್ಪಿನ ಬೀಜ ಬಿತ್ತಿ ಪ್ರತಿಭಟನೆ

Last Updated 11 ಮಾರ್ಚ್ 2023, 19:33 IST
ಅಕ್ಷರ ಗಾತ್ರ

ಬೆಂಗಳೂರು: ಬಸವನಗುಡಿಯ ಅನೇಕ ಸ್ಥಳಗಳಲ್ಲಿ ಕಾಮಗಾರಿ ಆರಂಭಿಸಿ, ಅರ್ಧಕ್ಕೇ ಸ್ಥಗಿತಗೊಳಿಸಲಾಗಿದೆ. ಇದರಿಂದ ಮಣ್ಣಿನ ರಾಶಿಯಿಂದ ರಸ್ತೆಗಳು ತುಂಬಿವೆ ಎಂದು ಆರೋಪಿಸಿರುವ ಕಾಂಗ್ರೆಸ್‌ ಕಾರ್ಯಕರ್ತರು, ಅದೇ ಸ್ಥಳದಲ್ಲಿ ಸೊಪ್ಪಿನ ಬೀಜ ಬಿತ್ತಿ ವಿನೂತನವಾಗಿ ಪ್ರತಿಭಟಿಸಿದರು.

‘ಮಣ್ಣಿನ ರಾಶಿಯ ಮೇಲೆ ಸಾರ್ವಜನಿಕರು ತರಕಾರಿ ಬೆಳೆದು ತಿನ್ನಲಿ ಎಂದು ಶಾಸಕರು, ಸಂಸದರು ಬಯಸಿರಬೇಕು. ಆ ಕಾರಣಕ್ಕೆ ಶ್ರೀನಗರದ ರಸ್ತೆಯಲ್ಲಿ ಮೆಂತೆ ಸೊಪ್ಪಿನ ಬೀಜವನ್ನು ಹಾಕಲಾಗಿದೆ. ಸೊಪ್ಪು ಬೆಳೆದ ನಂತರ ಅದನ್ನು ಶಾಸಕರು, ಸಂಸದರ ಮನೆಗೆ ಕಳುಹಿಸಲಾಗುವುದು’ ಎಂದು ಕಾಂಗ್ರೆಸ್ ವಕ್ತಾರ ಡಾ.ಶಂಕರ್ ಗುಹಾ ದ್ವಾರಕಾನಾಥ್ ಹೇಳಿದರು.

‘ಇಷ್ಟು ದಿನಗಳ ಕಾಲ ಸುಮ್ಮನಿದ್ದು ಈಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ಎಲ್ಲೆಂದರಲ್ಲಿ ರಸ್ತೆ ರಿಪೇರಿ, ಚರಂಡಿ ರಿಪೇರಿ ಹಾಗೂ ನಾನಾ ರೀತಿಯ ಕಾಮಗಾರಿ ಪ್ರಾರಂಭಿಸಲಾಗಿದೆ. ಯಾವ ಕೆಲಸವೂ ಸಕಾಲದಲ್ಲಿ ಪೂರ್ಣಗೊಳ್ಳುತ್ತಿಲ್ಲ. ರಸ್ತೆಗಳನ್ನು ಅಗೆದು ತಿಂಗಳಾನುಗಟ್ಟಲೆ ಆದರೂ ಕೆಲಸ ಪೂರ್ಣಗೊಳ್ಳುತ್ತಿಲ್ಲ’ ಎಂದು ಆಕ್ರೋಶ ಹೊರಹಾಕಿದರು.

‘ನಾಗರಿಕರು ಮನೆಗಳಿಗೆ ಹೋಗಲು ಮನೆ ಬಾಗಿಲಿನಲ್ಲಿ ಗುಂಡಿ, ಕಲ್ಲಿನ ರಾಶಿ, ಮಣ್ಣಿನ ರಾಶಿಯನ್ನು ದಾಟಿ ಹೋಗಬೇಕಾಗಿದೆ. ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಬೇಕಾಗಿದೆ. ಈ ರೀತಿ ಅವ್ಯವಸ್ಥೆಯಿದ್ದರೂ ಮಣ್ಣಿನ ರಾಶಿ ತೆರವು ಮಾಡುತ್ತಿಲ್ಲ’ ಎಂದು ಆರೋಪಿಸಿದರು.

‘ಡಬಲ್ ಎಂಜಿನ್‌ ಸರ್ಕಾರ ಜನರಿಗೆ ಡಬಲ್ ತೊಂದರೆ ಕೊಡುತ್ತಿದೆ. ಶಾಸಕ ರವಿ ಸುಬ್ರಮಣ್ಯ ಮತ್ತು ಅವರ ಅಣ್ಣನ ಮಗ ಸಂಸದ ತೇಜಸ್ವಿ ಸೂರ್ಯ ಅವರ ಡಬಲ್ ಎಂಜಿನ್‌ ಅಧಿಕಾರವು ಜನರನ್ನು ಸಾಕಷ್ಟು ಸಂಕಷ್ಟಗಳಿಗೆ ತಳ್ಳುತ್ತಿದೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT