ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಓಂಕಾರ್ ಚೊಂಡಿ, ‘ವಚನ ದರ್ಶನ ಪುಸ್ತಕದ ಮುಖಪುಟದಲ್ಲಿ ಬಸವಣ್ಣ ಅವರ ಭಾವಚಿತ್ರವನ್ನು ವಿರೂಪವಾಗಿ ಬಿಂಬಿಸಿದ್ದು, ಅದರಲ್ಲಿ ಬಸವಾದಿ ಶರಣರ ಕುರುಹುಗಳಿಲ್ಲದೆ ಕೇಶಶಿಖಾ ಧ್ಯಾನಾಸಕ್ತ ಭಂಗಿಯ ವಟು, ಬಿಲ್ಲು ಬಾಣ, ತುಳಸಿಕಟ್ಟೆ ಚಿತ್ರಿಸಲಾಗಿದೆ. ಪುಸ್ತಕ ಬಿಡುಗಡೆ ವಿರೋಧಿಸಿ ಮಂಗಳವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಮಠಾಧೀಶರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದರು.