ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ₹754 ಕೋಟಿ ವೆಚ್ಚದಲ್ಲಿ 61 ಕಿ.ಮೀ ರಸ್ತೆ ವೈಟ್‌ ಟಾಪಿಂಗ್

Published 18 ಡಿಸೆಂಬರ್ 2023, 23:30 IST
Last Updated 18 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ  ₹754.74 ಕೋಟಿ ವೆಚ್ಚದಲ್ಲಿ 61.12 ಕಿ.ಮೀ ರಸ್ತೆಯನ್ನು ವೈಟ್‌ಟಾಪಿಂಗ್‌ ಮಾಡಲು ನಿರ್ಧರಿಸಲಾಗಿದ್ದು, ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರಿಸಲು ಟೆಂಡರ್‌ ಕರೆಯಲಾಗಿದೆ.

19 ವಿಧಾನಸಭೆ ಕ್ಷೇತ್ರಗಳಲ್ಲಿ ವೈಟ್‌ಟಾಪಿಂಗ್‌ ಕಾಮಗಾರಿ ನಡೆಯಲಿದ್ದು, ಇದಕ್ಕಾಗಿ 9 ಪ್ಯಾಕೇಜ್‌ಗಳನ್ನು ಮಾಡಲಾಗಿದೆ. ಡಿ.16ರಂದು ಟೆಂಡರ್‌ ಆಹ್ವಾನಿಸಲಾಗಿದ್ದು, 26ರಂದು ಬಿಡ್‌ ಸಲ್ಲಿಸಲು ಕೊನೆಯ ದಿನವಾಗಿದೆ.

ನಗರದಲ್ಲಿ ₹800 ಕೋಟಿ ವೆಚ್ಚದಲ್ಲಿ ರಸ್ತೆಗಳನ್ನು ವೈಟ್‌ ಟಾಪಿಂಗ್ ಮಾಡಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದ್ದರು.

ಯಾವ ವಿಧಾನಸಭೆ ಕ್ಷೇತ್ರದಲ್ಲಿ ಎಷ್ಟು ಕಿ.ಮೀ ರಸ್ತೆ ವೈಟ್‌ ಟಾಪಿಂಗ್‌?

ಸರ್ವಜ್ಞನಗರ, ಪುಲಕೇಶಿನಗರ: ₹105.94 ಕೋಟಿ ವೆಚ್ಚದಲ್ಲಿ 8.7 ಕಿ.ಮೀ.

ಶಾಂತಿನಗರ, ಶಿವಾಜಿನಗರ: ₹105.37 ಕೋಟಿ ವೆಚ್ಚದಲ್ಲಿ 7.38 ಕಿ.ಮೀ.

ಗೋವಿಂದರಾಜನಗರ, ವಿಜಯನಗರ: ₹75.25 ಕೋಟಿ ವೆಚ್ಚದಲ್ಲಿ 6.67 ಕಿ.ಮೀ.

ಬ್ಯಾಟರಾಯನಪುರ, ಯಲಹಂಕ, ಮಲ್ಲೇಶ್ವರ: ₹77.11 ಕೋಟಿ ವೆಚ್ಚದಲ್ಲಿ 6.48 ಕಿ.ಮೀ.

ರಾಜರಾಜೇಶ್ವರಿನಗರ, ಯಶವಂತಪುರ, ದಾಸರಹಳ್ಳಿ: ₹95.44 ಕೋಟಿ ವೆಚ್ಚದಲ್ಲಿ 7.25 ಕಿ.ಮೀ.

ಜಯನಗರ, ಚಿಕ್ಕಪೇಟೆ, ಚಾಮರಾಜಪೇಟೆ: ₹86.04 ಕೋಟಿ ವೆಚ್ಚದಲ್ಲಿ 6.8 ಕಿ.ಮೀ.

ಗಾಂಧಿನಗರ, ಬಿಟಿಎಂ ಲೇಔಟ್‌: ₹74.24 ಕೋಟಿ ವೆಚ್ಚದಲ್ಲಿ 7.44 ಕಿ.ಮೀ.

ಕೆ.ಆರ್‌. ಪುರ: ₹86.33 ಕೋಟಿ ವೆಚ್ಚದಲ್ಲಿ 5.5 ಕಿ.ಮೀ.

ಹೆಬ್ಬಾಳ: ₹50.02 ಕೋಟಿ ವೆಚ್ಚದಲ್ಲಿ 4.9 ಕಿ.ಮೀ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT