ಬೆಂಗಳೂರು: ಶಾಂತಿನಗರ ಕ್ಷೇತ್ರ ವ್ಯಾಪ್ತಿಯ ದೊಮ್ಮಲೂರು ವಾರ್ಡ್‌ನಲ್ಲಿನ ಅಮರ ಜ್ಯೋತಿ ಲೇಔಟ್‌ನ 5 ಮತ್ತು 6ನೇ ಮುಖ್ಯ ರಸ್ತೆಯಲ್ಲಿ ಮಳೆನೀರು ಸರಾಗವಾಗಿ ಹರಿದು ಹೋಗಲು ಕಲ್ವರ್ಟ್ ನಿರ್ಮಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಮರ ಜ್ಯೋತಿ ಲೇಔಟ್‌ನಲ್ಲಿ ಮಳೆಗಾಲದ ವೇಳೆ ರಸ್ತೆಗಳಲ್ಲಿ ನೀರು ನಿಲ್ಲುವ ಸಮಸ್ಯೆ ಪರಿಶೀಲಿಸಿದ ಅವರು, ‘5ನೇ ಮುಖ್ಯ ರಸ್ತೆಯ ಕರ್ನಾಟಕ ಗಾಲ್ಫ್ ಅಸೋಸಿಯೇಷನ್ ಆವರಣದಲ್ಲಿ ಸಣ್ಣ ಮೋರಿ ಇದೆ. ಹೊಸದಾಗಿ ಮೋರಿ ನಿರ್ಮಿಸಿದರೆ ರಸ್ತೆಗಳ ಮೇಲೆ ನಿಲ್ಲುವ ನೀರು ಸರಾಗವಾಗಿ ಹರಿದು ಹೋಗಲಿದೆ. ಗಾಲ್ಫ್ ಕ್ಲಬ್ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಿ ಸಮಸ್ಯೆ ಇತ್ಯರ್ಥಪಡಿಸಿ’ ಎಂದು ತಿಳಿಸಿದರು.
‘ಆಲ್ಬರ್ಟ್ ಸ್ಟ್ರೀಟ್ ರಸ್ತೆ ಬದಿಯ ಮೋರಿಗಳನ್ನು ಪುನರ್ ನವೀಕರಣ ಮಾಡಿ ನೀರು ಸರಾಗವಾಗಿ ಹರಿದು ಹೊಗುವಂತೆ ಮಾಡಬೇಕು. ಈ ಸಂಬಂಧ ತ್ವರಿತವಾಗಿ ಕಾಮಗಾರಿ ಪ್ರಾರಂಭಿಸಬೇಕು. ರಿಚ್ಮಂಡ್ ರಸ್ತೆ ಪಾದಚಾರಿ ಮಾರ್ಗಗಳಲ್ಲಿ ಅಳವಡಿಸಿರುವ ಸಸಿಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು’ ಎಂದು ಸೂಚನೆ ನೀಡಿದರು.
ಶಾಸಕ ಎನ್.ಎ.ಹ್ಯಾರೀಸ್, ಮುಖ್ಯ ಎಂಜಿನಿಯರ್‌ಗಳಾದ ಮೋಹನ್ ಕೃಷ್ಣ, ಸುಗುಣಾ, ಲೋಕೇಶ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.