ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BBMP Budget 2023: ಮತಬೇಟೆಗೆ ಬಿಬಿಎಂಪಿ ಬಜೆಟ್‌

Last Updated 3 ಮಾರ್ಚ್ 2023, 3:17 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಬಜೆಟ್‌ನಲ್ಲಿರುವ ಯೋಜನೆಗಳ ಪುನರುಚ್ಚಾರ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಲ್ಕಾರು ತಿಂಗಳಿಂದ ‍ಪ್ರಕಟಿಸಿದ್ದ ಯೋಜನೆಗಳನ್ನು ಒಗ್ಗೂಡಿಸಿ ಮೂರ್ನಾಲ್ಕು ಹೊಸ ಘೋಷಣೆಗಳೊಂದಿಗೆ ವಿಧಾನಸಭೆ ಚುನಾವಣೆಗೆ ‘ಘೋಷವಾಕ್ಯ’ವಾಗುವ ಬಜೆಟ್‌ ಅನ್ನು ಬಿಬಿಎಂಪಿ ಮಂಡಿಸಿದೆ.

ಜನಪ್ರತಿನಿಧಿಗಳಿಲ್ಲದ ಬಿಬಿಎಂಪಿಯಲ್ಲಿ ಅಧಿಕಾರಿಗಳ ಬಜೆಟ್‌ ಇದಾಗಿದ್ದರೂ, ಮುಖ್ಯಮಂತ್ರಿಯವರ ಆಣತಿಯಂತೆ ಎಲ್ಲವೂ ಮುಂಗಡಪತ್ರದಲ್ಲಿ ಸೇರಿಕೊಂಡಿವೆ. ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌, ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸಮ್ಮುಖದಲ್ಲಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಂ ರಾಯಪುರ ಅವರು ಪುರಭವನದಲ್ಲಿ ಗುರುವಾರ ಬಜೆಟ್‌ ಮಂಡಿಸಿದರು.

2023–24ನೇ ಸಾಲಿನ ₹11,163 ಕೋಟಿ ಗಾತ್ರದ ಆಯವ್ಯಯದಲ್ಲಿ, ₹6.14 ಕೋಟಿ ಉಳಿಕೆ ತೋರಲಾಗಿದೆ. ಮೇಲ್ಸೇತುವೆಗಳ ನಿರ್ಮಾಣಕ್ಕೆ ₹770 ಕೋಟಿ ಸಾಲ ಮಾಡಲು ಉದ್ದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT