ಬೆಂಗಳೂರು: ಅನಧಿಕೃತವಾಗಿ ವಿದ್ಯುತ್ ಕಂಬ, ಮರಗಳು ಮತ್ತು ಕಟ್ಟಡಗಳ ಮೇಲ್ಭಾಗ ಹಾಗೂ ಪಾದಚಾರಿ ಮಾರ್ಗಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಒಎಫ್ಸಿ ಕೇಬಲ್ಗಳನ್ನು ತೆರವುಗೊಳಿಸಬೇಕು ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥಪ್ರಸಾದ್ ತಿಳಿಸಿದರು.

‘ಅನಧಿಕೃತ ಟಿ.ವಿ ಕೇಬಲ್ ಮತ್ತು ಇಂಟರ್ನೆಟ್ ಕೇಬಲ್ಗಳನ್ನು ಕೂಡಲೇ ಗುರುತಿಸಬೇಕು’ ಎಂದು ಎಲ್ಲಾ ವಲಯದ ಮುಖ್ಯ ಎಂಜಿನಿಯರ್ಗಳಿಗೆ ಸೂಚನೆ ನೀಡಿದರು.

‘ಕೇಬಲ್ ಅಳವಡಿಸಲು ಅನುಮತಿ ಪಡೆದಿದ್ದರೆ ಅದರ ಪತ್ರ ಪರಿಶೀಲಿಸಿ ನಿಯಮಾನುಸಾರ ಕೇಬಲ್ಗಳನ್ನು ಅಳವಡಿಸಿಕೊಳ್ಳಲು ಸಂಬಂಧಪಟ್ಟ ಸಂಸ್ಥೆಗಳಿಗೆ ಸೂಚನೆ ನೀಡಬೇಕು. ಕೇಬಲ್ ಅಳವಡಿಸಲು ಪಾಲಿಕೆಯಿಂದ ಅನುಮತಿ ಪಡೆಯದಿದ್ದರೆ ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದರು.

‘ಪಾದಚಾರಿ ಮಾರ್ಗದಲ್ಲಿ ಎಲ್ಲೆಂದರಲ್ಲಿ ಅನಧಿಕೃತವಾಗಿ ಒಎಫ್ಸಿ ಕೇಬಲ್ಗಳನ್ನು ಅಳವಡಿಸಲಾಗಿದೆ. ಇದರಿಂದ ಪಾದಚಾರಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಪಾದಚಾರಿ ಮಾರ್ಗಗಳಲ್ಲಿ ಕೇಬಲ್ಗಳಿದ್ದರೆ ಕೂಡಲೆ ತೆರವುಗೊಳಿಸಬೇಕು’ ಎಂದು ಸೂಚನೆ ನೀಡಿದರು.

‘ಹೈ ಟೆನ್ಷನ್ ಲೈನ್ ಕೆಳಗೆ ಅನಧಿಕೃತವಾಗಿ ಕಟ್ಟಡ ಅಥವಾ ಶೆಡ್ಗಳನ್ನು ನಿರ್ಮಿಸಿಕೊಂಡಿದ್ದಾರೆ. ಈ ಸಂಬಂಧ ಅನಧಿಕೃತವಾಗಿ ಕಟ್ಟಡ ನಿರ್ಮಿಸಿಕೊಂಡವರಿಗೆ ಬೆಸ್ಕಾಂನಿಂದ ನೋಟಿಸ್ ನೀಡಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಬೇಕು. 15 ದಿನಗಳಲ್ಲಿ ಸ್ವಯಂ ತೆರವುಗೊಳಿಸಲು ಸೂಚನೆ ನೀಡಬೆಕು. ತೆರವಾಗದಿದ್ದರೆ ಪೊಲೀಸ್ ಭದ್ರತೆಯೊಂದಿಗೆ ಕಟ್ಟಡ ತೆರವುಗೊಳಿಸಿ ಅದರ ವೆಚ್ಚವನ್ನು ಸಂಬಂಧಪಟ್ಟವರಿಂದ ವಸೂಲಿ ಮಾಡಬೇಕು’ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.