ಗುರುವಾರ , ಆಗಸ್ಟ್ 6, 2020
24 °C

ಪರಿಸರಸ್ನೇಹಿ ಗಣೇಶ ವಿಗ್ರಹ ಪೂಜಿಸಿ: ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ (ಪಿಒಪಿ) ಗಣೇಶ ವಿಗ್ರಹಗಳ ಆರಾಧನೆ ಕೈಬಿಟ್ಟು, ಮಣ್ಣಿನ ವಿಗ್ರಹಗಳನ್ನು ಪೂಜಿಸಿ’ ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು. 

ಪರಿಸರಸ್ನೇಹಿ ಗಣೇಶ ವಿಗ್ರಹಗಳ ಬಳಕೆ ಉತ್ತೇಜಿಸಲು ‘ಬಾಂಧವ’ ಸಂಸ್ಥೆ ಶನಿವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾದಲ್ಲಿ ಮಾತನಾಡಿದರು. 

‘ಪಿಒಪಿ ಗಣೇಶ ವಿಗ್ರಹಗಳು ನೀರಿನಲ್ಲಿ ಕರಗುವುದಿಲ್ಲ. ಅವುಗಳಿಗೆ ಬಳಸುವ ಬಣ್ಣಗಳಲ್ಲಿರುವ ರಾಸಾಯನಿಕಗಳಿಂದಾಗಿ ಕೆರೆಗಳು ಮಲಿನವಾಗಿ, ಜಲಚರಗಳು ಸಾಯುತ್ತವೆ. ಆದ್ದರಿಂದ ಪಿಒಪಿಯಿಂದ ತಯಾರಿಸಿದ ವಿಗ್ರಹಗಳ ಸಂಪೂರ್ಣ ನಿಷೇಧದ ಅನುಷ್ಠಾನಕ್ಕೆ ಸಹಕಾರ ನೀಡಬೇಕು’ ಎಂದು ಕೋರಿದರು. 

ಶಾಸಕಿ ಸೌಮ್ಯಾ ರೆಡ್ಡಿ, ‘ನಗರದ ಕೆರೆಗಳ ನೀರು ಕಲುಷಿತವಾಗುತ್ತಿವೆ. ಹೆಚ್ಚುತ್ತಿರುವ ಮಾಲಿನ್ಯ ನಗರಕ್ಕೆ ಕಪ್ಪು ಚುಕ್ಕೆ’ ಎಂದರು. 

5 ಸಾವಿರ ವಿತರಣೆ: ಬಾಂಧವ ಸಂಸ್ಥೆಯು ಜೇಡಿಮಣ್ಣಿನಿಂದ ತಯಾರಿಸಿದ 5,001 ಗಣೇಶ ವಿಗ್ರಹಗಳನ್ನು ಉಚಿತವಾಗಿ ವಿತರಣೆ ಮಾಡಲಿದೆ. ಶಾಲಾ ವಿದ್ಯಾರ್ಥಿಗಳೊಂದಿಗೆ ಜಾಗೃತಿ ಆಭಿಯಾನ ಹಮ್ಮಿಕೊಂಡಿದೆ. ಮಕ್ಕಳೇ ಗಣೇಶ ವಿಗ್ರಹಗಳನ್ನು ತಯಾರಿಸಲಿದ್ದಾರೆ. ಆ.31ರಂದು ಜಯನಗರ ಕಾಂಪ್ಲೆಕ್ಸ್ ಸಂಕಿರಣದ ಮುಂಭಾಗ ವಿಗ್ರಹ ವಿತರಣೆ ಮಾಡಲಾಗುತ್ತದೆ. ಸಂಪರ್ಕ: 9341389999

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು