ಬೆಂಗಳೂರು: ನಗರದಲ್ಲಿರುವ ಏಕ ನಿವೇಶನಗಳಿಗೆ ‘ವಿನ್ಯಾಸ ನಕ್ಷೆ’ ನೀಡುವ ಅಧಿಕಾರವನ್ನು ಬಿಬಿಎಂಪಿ ಮುಖ್ಯ ಆಯುಕ್ತರಿಗೇ ನೀಡಲಾಗಿದ್ದು, ಸ್ಥಗಿತಗೊಂಡಿದ್ದ ಖಾತಾ, ಕಟ್ಟಡ ನಕ್ಷೆ ಮಂಜೂರು ಪ್ರಕ್ರಿಯೆ ಆರಂಭವಾಗಿದೆ.

ಕೃಷಿಯೇತರ ಉದ್ದೇಶಕ್ಕಾಗಿ ಭೂ ಪರಿವರ್ತನೆಯಾದ ಹಾಗೂ ಪರಿವರ್ತನೆಯಾಗದ ಏಕ ನಿವೇಶನಗಳಿಗೆ ‘ಎ’ ಖಾತಾ ಪಡೆದುಕೊಳ್ಳಲು ಬಿಡಿಎಯಿಂದ ‘ವಿನ್ಯಾಸ ನಕ್ಷೆ’ ಅನುಮೋದನೆ ಪಡೆದುಕೊಳ್ಳಬೇಕಿತ್ತು. ಅದರ ನಂತರವಷ್ಟೇ ಬಿಬಿಎಂಪಿಯಿಂದ ಖಾತಾ ಹಾಗೂ ಕಟ್ಟಡ ನಕ್ಷೆ ಪಡೆದುಕೊಳ್ಳಬಹುದಾಗಿತ್ತು. ಆದರೆ, ಇದೀಗ ಬಿಬಿಎಂಪಿಯೇ ಒಂದು ಎಕರೆವರೆಗಿನ ಏಕ ನಿವೇಶನಗಳಿಗೆ ‘ವಿನ್ಯಾಸ ನಕ್ಷೆ’ ನೀಡಲಿದೆ.

ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ (ಕೆಎಲ್ಆರ್) ಸೆಕ್ಷನ್ 95ರಡಿ ಕೃಷಿ ಜಮೀನಿನಿಂದ ಕೃಷಿಯೇತರ ಉದ್ದೇಶಕ್ಕಾಗಿ ಭೂ ಪರಿವರ್ತನೆಯಾದ ‘ಏಕ ನಿವೇಶನ’ಕ್ಕೆ ಬಿಬಿಎಂಪಿ ಅನುಮೋದನೆ ನೀಡಿ, ಖಾತಾ ನೀಡುತ್ತಿತ್ತು. ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ (ಕೆಟಿಸಿಪಿ) ಕಾಯ್ದೆ 1961ರ ಸೆಕ್ಷನ್ 17ಕ್ಕೆ ತಿದ್ದುಪಡಿಯಾದ ನಂತರ ಏಕ ನಿವೇಶನವೂ ಸೇರಿದಂತೆ ಎಲ್ಲ ಸ್ವತ್ತುಗಳಿಗೂ ಯೋಜನಾ ಪ್ರಾಧಿಕಾರದ ಅನುಮೋದನೆ ಕಡ್ಡಾಯವಾಗಿತ್ತು.

ಈ ತಿದ್ದುಪಡಿಯಿಂದ ಬಿಡಿಎ ಅಥವಾ ಯೋಜನಾ ಪ್ರಾಧಿಕಾರದಿಂದ ಅನುಮೋದನೆಯಾಗದ ಸ್ವತ್ತುಗಳಿಗೆ ಬಿಬಿಎಂಪಿ ಖಾತೆ ನೀಡುತ್ತಿರಲಿಲ್ಲ. ಇದೀಗ ಕೆಟಿಸಿಪಿ ಕಾಯ್ದೆಯ ಸೆಕ್ಷನ್ 81ರಡಿ ಅಧಿಕಾರ ಚಲಾಯಿಸಿ, ಬಿಬಿಎಂಪಿ ವ್ಯಾಪ್ತಿಯ ಏಕ ನಿವೇಶನಗಳಿಗೆ ‘ವಿನ್ಯಾಸ ನಕ್ಷೆ’ ಮಂಜೂರು ನೀಡುವ ಅಧಿಕಾರವನ್ನು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪ್ರತ್ಯಾಯೋಜಿಸಿ ಸರ್ಕಾರ ಆದೇಶಿಸಿದೆ.

‘ಕೆಟಿಸಿಪಿ ಕಾಯ್ದೆಯಂತೆ ಸಕ್ಷಮ ಪ್ರಾಧಿಕಾರದಿಂದ ‘ವಿನ್ಯಾಸ ನಕ್ಷೆ’ ಅನುಮೋದಿಸದಿದ್ದರೆ ಆ ಪ್ರದೇಶಗಳಲ್ಲಿ ಅಡ್ಡಾದಿಡ್ಡಿ ಬೆಳವಣಿಗೆಯಾಗುವ ಸಂಭವವಿರುತ್ತದೆ. ಮಾಸ್ಟರ್ ಪ್ಲಾನ್ನಂತೆ ಯೋಜಿತ ಬೆಳವಣಿಗೆಯನ್ನು ಆಧರಿಸಿ ವಿನ್ಯಾಸ ನಕ್ಷೆಯನ್ನು ಅನುಮೋದಿಸಲಾಗುತ್ತದೆ. ಇದರಿಂದ ಕೆರೆ, ಕಾಲುವೆ ಸೇರಿದಂತೆ ಸರ್ಕಾರಿ ಜಮೀನುಗಳ ಒತ್ತುವರಿಗಳನ್ನು ಈ ಸಂದರ್ಭದಲ್ಲೇ ತಡೆಯಬಹುದು. ಅಲ್ಲದೆ, ಮಾಸ್ಟರ್ ಪ್ಲಾನ್ನಂತೆ ವಾಣಿಜ್ಯ, ವಸತಿ ಪ್ರದೇಶಗಳ ವರ್ಗೀಕರಣ ಸೇರಿದಂತೆ ರಸ್ತೆ, ಚರಂಡಿಯಂತಹ ಮೂಲಸೌಕರ್ಯಗಳು ಹೇಗಿರಬೇಕು ಎಂಬುದೂ ‘ವಿನ್ಯಾಸ ನಕ್ಷೆ’ಯಲ್ಲಿ ನಮೂದಾಗಿರುತ್ತದೆ. ಇದರಿಂದ ಯೋಜನಾಬದ್ಧವಾಗಿ ಅಭಿವೃದ್ಧಿ ಸಾಧ್ಯವಾಗುತ್ತದೆ. ಈಗ ಬಿಬಿಎಂಪಿಯೇ ಈ ವಿನ್ಯಾಸ ನಕ್ಷೆಯನ್ನು ನೀಡಿ, ಎ ಖಾತಾ, ಕಟ್ಟಡ ನಕ್ಷೆಗಳಿಗೆ ಅನುಮೋದನೆ ನೀಡಲಿದೆ’ ಎಂದು ಬಿಬಿಎಂಪಿ ನಗರ ಯೋಜನೆ ವಿಭಾಗದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

ಯಾರಿಗೆ ವಿನ್ಯಾಸ ನಕ್ಷೆ?

ನಗರ ಟೈಟಲ್ ಸರ್ವೆ (ಸಿಟಿಎಸ್) ಸಂಖ್ಯೆ ಹೊಂದಿರುವ ನಿವೇಶನ

ನಗರಸಭೆ, ಪುರಸಭೆ, ಗ್ರಾಮ ಪಂಚಾಯಿತಿಗಳಿಂದ ಬಿಬಿಎಂಪಿ ವ್ಯಾಪ್ತಿಗೆ ಬಂದಾಗ ‘ಎ’ ರಿಜಿಸ್ಟರ್ನಲ್ಲಿ ನಮೂದಾಗಿರುವ ಖಾತಾ ಹೊಂದಿರುವ ನಿವೇಶನ

ಬಿಡಿಎಯಿಂದ ನಿರ್ಮಾಣವಾದ, ಅನುಮೋದನೆಯಾದ ನಿವೇಶನಗಳು, ಅಭಿವೃದ್ಧಿ ಯೋಜನಾ ನಕ್ಷೆ ಮಂಜೂರು ಪಡೆದ ನಿವೇಶನ

ಬಿಬಿಎಂಪಿಯಿಂದ ಈಗಾಗಲೇ ಕಟ್ಟಡ ನಕ್ಷೆ ಪಡೆದಿದ್ದು, ಪರಿಷ್ಕೃತ ಅಥವಾ ಹೆಚ್ಚುವರಿ ಕಟ್ಟಡ ನಿರ್ಮಾಣದ ಪ್ರಸ್ತಾವಗಳು

ಬಿಡಿಎ, ಬಿಎಂಐಸಿಎಪಿ ಸೇರಿದಂತೆ ಕೆಟಿಸಿಪಿ ತಿದ್ದುಪಡಿ ಕಾಯ್ದೆ ಸೆಕ್ಷನ್ 17ರಡಿ ಅನುಮೋದನೆಯಾದ ಏಕ ನಿವೇಶನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.