ಸೋಮವಾರ, ಆಗಸ್ಟ್ 15, 2022
23 °C

ಹೊರಗುತ್ತಿಗೆ ಶಿಕ್ಷಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿಯ ಶಾಲಾ ಕಾಲೇಜುಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ‘ಸಮಾನ ಕೆಲಸಕ್ಕೆ ಸಮಾನ ವೇತನ’ ನೀಡುವ ಕುರಿತು ಕೌನ್ಸಿಲ್‌ ಸಭೆಯಲ್ಲಿ ಮಂಗಳವಾರ ನಿರ್ಣಯ ಕೈಗೊಳ್ಳಲಾಯಿತು.

ಬಿಬಿಎಂಪಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಹೊರಗುತ್ತಿಗೆ ಶಿಕ್ಷಕರು ಈಗಲೂ ತಿಂಗಳಿಗೆ ₹ 8 ಸಾವಿರದಿಂದ ₹13 ಸಾವಿರ ಗೌರವಧನ ಪಡೆಯುತ್ತಿದ್ದಾರೆ. ಈ ನಿರ್ಣಯ ಜಾರಿಯಾದರೆ ಅವರಿಗೂ ಕಾಯಂ ಶಿಕ್ಷಕರ ವೇತನದಷ್ಟೇ ಗೌರವಧನ ಸಿಗಲಿದೆ.

ಕೌನ್ಸಿಲ್‌ ನಿರ್ಣಯದ ಬಗ್ಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಹೊರಗುತ್ತಿಗೆ ಶಿಕ್ಷಕರ ಸಂಘದ ಅಧ್ಯಕ್ಷ ಎನ್‌.ಲೋಕೇಶ್‌, ‘ಈ ನಿರ್ಣಯ ಕೈಗೊಂಡಿದ್ದಕ್ಕೆ ಧನ್ಯವಾದ. ಈ ಬಗ್ಗೆ ಈಗಲೇ ಸಂತೋಷ ಪಡುವ ಪರಿಸ್ಥಿತಿಯಲ್ಲಿ ನಾವಿಲ್ಲ. ಟೈಲರಿಂಗ್‌ ತರಬೇತಿ ಶಿಕ್ಷಕಿಯರಿಗೆ ಸಮಾನ ವೇತನ ಜಾರಿ ಮಾಡಲಾಗಿದೆ. ಅದೇ ರೀತಿ ನಮಗೂ ಶೀಘ್ರ ಜಾರಿಗೊಳಿಸಬೇಕು. ಆಗ ನಾವೂ ಖುಷಿಪಡಬಹುದು’ ಎಂದರು.

‘ಹೊರಗುತ್ತಿಗೆ ತೆಗೆದು, ನೇರ ಗುತ್ತಿಗೆ ಪದ್ಧತಿ ಜಾರಿಗೊಳಿಸಿದರೆ ನಮ್ಮ ನೇಮಕಾತಿಗೆ ಅನುಕೂಲವಾಗುತ್ತದೆ. ಈ ಮಾರ್ಪಾಡನ್ನೂ ಮಾಡಬೇಕು’ ಎಂದು ಒತ್ತಾಯಿಸಿದರು.

ಮೇಯರ್‌, ಬಿಬಿಎಂಪಿ ಆಡಳಿತ ಪಕ್ಷದ ನಾಯಕರು, ವಿರೋಧ ಪಕ್ಷದ ನಾಯಕರು ಹಾಗೂ ಪಾಲಿಕೆ ಸದಸ್ಯರನ್ನು ಭೇಟಿಯಾಗಿ ಶಿಕ್ಷಕರು ತಮ್ಮ ಸಂಕಷ್ಟು ಹೇಳಿಕೊಂಡಿದ್ದರು.

ಶಿಕ್ಷಕರು ಅನುಭವಿಸುತ್ತಿರುವ ಸಮಸ್ಯೆ ಬಗ್ಗೆ ‘ಪ್ರಜಾವಾಣಿ’ಯು ಸೆ.6ರ (ಭಾನುವಾರ) ಸಂಚಿಕೆಯಲ್ಲಿ ‘ಐದು ತಿಂಗಳಿನಿಂದ ಗೌರವಧನವಿಲ್ಲದೆಯೇ ಜೀವನ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು