ಬೆಂಗಳೂರು: ಪಾದಚಾರಿಗಳಿಗೆ ಸೌಲಭ್ಯವನ್ನು ವೃದ್ಧಿಸಲು ಪಾಲಿಕೆ ಸಿದ್ಧವಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್ ಹೇಳಿದರು.

ಬಿ.ಪ್ಯಾಕ್ನ ‘ಐಆರ್ಆರ್ ಸ್ಟ್ರೀಟ್ (ಒಳವರ್ತುಲ ರಸ್ತೆ): ಸ್ಥಗಿತದಿಂದ ಸಕ್ರಿಯದೆಡೆಗೆ’ ಉಪಕ್ರಮದ ವರದಿಯನ್ನು ಶನಿವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಪಾದಚಾರಿಗಳಿಗೆ ಸೌಲಭ್ಯಗಳನ್ನು ಕಲ್ಪಿಸುವ ಉಪಕ್ರಮಕ್ಕೆ ನಾವು ಹಣವನ್ನು ನೀಡುತ್ತೇವೆ. ಪಾದಚಾರಿ ಮಾರ್ಗಗಳನ್ನು ಹೆಚ್ಚಿಸಿದರೆ, ಅದನ್ನು ಬಳಸುವವರ ಪ್ರಮಾಣವೂ ಹೆಚ್ಚಾಗುತ್ತದೆ. ಸುರಕ್ಷತೆ ಸೇರಿದಂತೆ ಹಲವು ಸಮಸ್ಯೆಗಳಿಗೂ ಇದು ಪರಿಹಾರ ಕಲ್ಪಿಸುತ್ತದೆ’ ಎಂದರು.

ಬಿ.ಪ್ಯಾಕ್ನ ಸಿಇಒ ರೇವತಿ ಅಶೋಕ್ ಮಾತನಾಡಿ, ‘ಐಆರ್ಆರ್ ಸ್ಟ್ರೀಟ್: ಸ್ಥಗಿತದಿಂದ ಸಕ್ರಿಯದೆಡೆಗೆ’ ಉಪಕ್ರಮದಡಿ, ಇಂದಿರಾನಗರದ ಕೆಎಫ್ಸಿ ಜಂಕ್ಷನ್ನಿಂದ ಕೋರಮಂಗಲದ ಮಡಿವಾಳದ ಮಸೀದಿವರೆಗೆ 7.5 ಕಿ.ಮೀ ಒಳ ವರ್ತುಲ ರಸ್ತೆಯಲ್ಲಿ, ಸಂಚಾರ ದಟ್ಟಣೆ, ರಸ್ತೆ ಸುರಕ್ಷತೆ, ಪಾದಚಾರಿಗಳ ಸಮಸ್ಯೆ, ಕ್ರಾಸಿಂಗ್ ಇಲ್ಲದ್ದು, ಕಡಿಮೆ ಬಸ್ ಸಂಚಾರಗಳಿಗೆ ಪರಿಹಾರ ಕಲ್ಪಿಸಲಾಗಿದೆ. ಇದು ನಾಗರಿಕರೊಂದಿಗಿನ ಸಹಯೋಗದಲ್ಲಿ ಸರ್ಕಾರಿ ಸಂಸ್ಥೆಗಳೊಂದಿಗೆ ನಡೆಸಿದ ಪ್ರಯತ್ನಕ್ಕೆ ಸಿಕ್ಕ ಯಶಸ್ಸಾಗಿದೆ. ರಸ್ತೆಗಳನ್ನು ಸರಿಪಡಿಸುವುದಷ್ಟೇ ಅಲ್ಲ, ಸಾರ್ವಜನಿಕ ಪ್ರದೇಶಗಳ ದತ್ತಾಂಶ, ವಿನ್ಯಾಸ ಮತ್ತು ಮರುವಿನ್ಯಾಸಗೊಳಿಸುವುದಾಗಿದೆ. ಸುರಕ್ಷತೆ, ಸ್ವಚ್ಛತೆ ಹಾಗೂ ಎಲ್ಲರಿಗೂ ಲಭ್ಯವಾಗುವಂತೆ ಮಾಡುವಂತಹದ್ದಾಗಿದೆ’ ಎಂದರು.

ಈ ಉಪಕ್ರಮದಡಿ ಸರ್ಕಾರಿ ಸಂಸ್ಥೆಗಳ ಸಹಯೋಗದೊಂದಿಗೆ ಹಲವು ಸಾಧನೆಗಳನ್ನು ಮಾಡಲಾಗಿದೆ. 2023ರ ನವೆಂಬರ್ನಲ್ಲಿ 17 ಬಸ್ಗಳಿಂದ 169 ದೈನಂದಿನ ಟ್ರಿಪ್ಗಳಿದ್ದವು. 2025ರ ಜುಲೈ ವೇಳೆಗೆ ಇದನ್ನು 26 ಬಸ್ಗಳಿಂದ 225 ಟ್ರಿಪ್ಗಳಿಗೆ ಹೆಚ್ಚಿಸಲಾಗಿದೆ.

ಬಿಬಿಎಂಪಿಯ ಸಹಯೋಗದೊಂದಿಗೆ ರಸ್ತೆಯಲ್ಲಿ ಬ್ಲ್ಯಾಕ್ಸ್ಪಾಟ್ಗಳನ್ನು ತೆರವುಗೊಳಿಸಲಾಗಿದೆ. ಇದರ ಪರಿಣಾಮವಾಗಿ, 2024ರ ನವೆಂಬರ್ನಿಂದ 2025ರ ಜನವರಿವರೆಗೆ ಯಾವುದೇ ಸಾವಿನ ಪ್ರಕರಣಗಳು ದಾಖಲಾಗಿಲ್ಲ. ರಸ್ತೆಗಳ ಮಧ್ಯೆ ಮತ್ತು ಪಾದಚಾರಿ ಮಾರ್ಗಗಳಲ್ಲಿದ್ದ 4,300 ಟನ್ಗಿಂತ ಹೆಚ್ಚು ಕಟ್ಟಡಗಳ ತ್ಯಾಜ್ಯ, 130 ನಿರ್ಮಾಣ ತಡೆಗೋಡೆಗಳು ಮತ್ತು 129 ಟನ್ ಕಸವನ್ನು ತೆರವುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.