ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ: ಇಂದಿನಿಂದ 308 ನಿವೇಶನಗಳ ಇ-ಹರಾಜು

Last Updated 19 ಜುಲೈ 2020, 17:34 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವತಿಯಿಂದ 308 ನಿವೇಶನಗಳ ಇ-ಹರಾಜು ಪ್ರಕ್ರಿಯೆ ಇದೇ 20ರಂದು ಬೆಳಿಗ್ಗೆ 11 ಗಂಟೆಯಿಂದ ಆರಂಭವಾಗಲಿದೆ.

ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸವವರು ಪ್ರತಿ ನಿವೇಶನಕ್ಕೆ ₹4 ಲಕ್ಷ ಭದ್ರತಾ ಠೇವಣಿ ಪಾವತಿಸಿ, ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಮಾಡಿಕೊಂಡವರು ತಕ್ಷಣದಿಂದಲೇ 308 ಸೈಟ್‍ಗಳಿಗೂ ಬಿಡ್ಡಿಂಗ್ ಮಾಡಬಹುದು.

ಐದು ಹಂತದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಕ್ರಮವಾಗಿ 1ರಿಂದ 75 ಸಂಖ್ಯೆಯ ನಿವೇಶನಗಳ ಹರಾಜು ಆಗಸ್ಟ್ 6ಕ್ಕೆ ಮುಕ್ತಾಯವಾಗಲಿದೆ. ಆ.7ರಂದು 76ರಿಂದ 127ನೇ ಸಂಖ್ಯೆಯ ನಿವೇಶನಗಳು, ಆ.8ರಂದು 128ರಿಂದ 191, ಆ.11ರಂದು 192ರಿಂದ 254 ಹಾಗೂ ಆ.12ರಂದು 255ರಿಂದ 308 ಸಂಖ್ಯೆಯ ನಿವೇಶನಗಳ ಹರಾಜು ಮುಕ್ತಾಯವಾಗಲಿದೆ. ಪ್ರತಿ ಹಂತದ ಹರಾಜಿನಲ್ಲೂ ನಿಗದಿತ ದಿನಾಂಕದ ಹಿಂದಿನ ದಿನದ ಸಂಜೆ 4 ಗಂಟೆಯವರೆಗೆ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT