ಮಲ್ಲೇಶ್ವರದ ಮಂತ್ರಿ ಮಾಲ್‌ನಲ್ಲಿನ ಹೋಟೆಲ್‌ಗಳು, ಸೂಪರ್ ಮಾರುಕಟ್ಟೆಗಳು ಹಾಗೂ ಐಸ್‌ಕ್ರೀಂ ಪಾರ್ಲರ್‌ಗಳನ್ನು ಆಗಸ್ಟ್ 3 ರಂದು ಪರಿಶೀಲಿಸಲಾಗಿತ್ತು. ಆ ವೇಳೆ ಅಲ್ಲಿ ಎರಡು ವಿಧದ ಮೊಟ್ಟೆಗಳು ಕಂಡುಬಂದಿದ್ದವು. ಈ ಮೊಟ್ಟೆಗಳನ್ನು ಹೊಂಗಸಂದ್ರದ ಕಂಪನಿಯೊಂದರಿಂದ ಪೂರೈಸಲಾಗಿತ್ತು. ಸ್ಥಳ ಪರೀಕ್ಷಿಸಿ, ಮೊಟ್ಟೆಗಳ ಬಗ್ಗೆ ವರದಿ ಸಲ್ಲಿಸುವಂತೆ ಸುರೇಶ್ ಅವರಿಗೆ ಸೂಚಿಸಲಾಗಿತ್ತು. ಆದರೆ, ಅವರು ಈವರೆಗೂ ವರದಿ ನೀಡಿಲ್ಲ. ಆರು ತಿಂಗಳ ಮಾಸಿಕ ವರದಿಯನ್ನೂ ಸಲ್ಲಿಸಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.