ಬೆಂಗಳೂರು: ಖಾಸಗಿ ವಿಡಿಯೊ ಹಾಗೂ ಫೋಟೊ ಇಟ್ಟುಕೊಂಡು ಮಹಿಳೆಗೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಇಬ್ಬರ ವಿರುದ್ಧ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

32 ವರ್ಷದ ಮಹಿಳೆ ನೀಡಿದ ದೂರು ಆಧರಿಸಿ ಎನ್.ಡಿ.ಸ್ವರೂಪ್ ಗೌಡ ಹಾಗೂ ಶೂಟ್ ಗಿರಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

‘ದೂರು ನೀಡಿದ ಮಹಿಳೆ, ತಮ್ಮ ಚಿಕ್ಕಮ್ಮನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. 2022ರಲ್ಲಿ ಸ್ವರೂಪ್ ಗೌಡ ಎಂಬಾತ ಫೇಸ್ಬುಕ್ ಮೂಲಕ ಮಹಿಳೆಗೆ ಪರಿಚಯವಾಗಿದ್ದ. ಇಬ್ಬರೂ ಪರಸ್ಪರ ಮೊಬೈಲ್ ಸಂಖ್ಯೆ ಬದಲಾವಣೆ ಮಾಡಿಕೊಂಡು ಚಾಟ್ ನಡೆಸುತ್ತಿದ್ದರು. ಇಬ್ಬರೂ ಆಗಾಗ್ಗೆ ಭೇಟಿ ಆಗುತ್ತಿದ್ದರು. ಈ ನಡುವೆ ಮನೆಯಲ್ಲಿ ತೊಂದರೆ ಇದೆ ಎಂದು ಹೇಳಿಕೊಂಡಿದ್ದ ಆರೋಪಿ, ಆರಂಭದಲ್ಲಿ ಮಹಿಳೆಯಿಂದ ₹4.42 ಲಕ್ಷ ಹಣವನ್ನು ಪಡೆದುಕೊಂಡಿದ್ದ. ನಂತರ, ಇನ್ನೂ ಹೆಚ್ಚಿನ ಹಣ ಬೇಕೆಂದು ಕೇಳಿದ್ದ. ಹಣ ಇಲ್ಲ ಎಂದಾಗ ಖಾಸಗಿ ಕ್ಷಣದ ವಿಡಿಯೊಗಳಿದ್ದು, ಅವುಗಳನ್ನು ನಿನ್ನ ಪತಿಗೆ ಕಳುಹಿಸುವುದಾಗಿ ಬೆದರಿಕೆ ಹಾಕುತ್ತಿದ್ದ’ ಎಂಬುದಾಗಿ ನೀಡಿದ ದೂರು ಆಧರಿಸಿ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.

ಆಭರಣ ಗಿರವಿ ಇಟ್ಟಿದ್ದ ಮಹಿಳೆ: ‘ಆರೋಪಿಯ ಬೆದರಿಕೆಗೆ ಹೆದರಿದ್ದ ದೂರುದಾರೆ, ತನ್ನ ಬಳಿಯಿದ್ದ ಆಭರಣಗಳನ್ನು ಗಿರವಿ ಇಟ್ಟು ಮತ್ತಷ್ಟು ಹಣ ನೀಡಿದ್ದರು. ಮಹಿಳೆಯಿಂದ ಆರೋಪಿ ಒಟ್ಟು ₹8.62 ಲಕ್ಷವನ್ನು ಪಡೆದುಕೊಂಡಿದ್ದ. ಕೆಲವು ದಿನ ಕಳೆದ ಮೇಲೆ ಹಣ ವಾಪಸ್ ನೀಡುವಂತೆ ಮಹಿಳೆ ಕೇಳಿದ್ದರು. ನನಗೆ ಬೇರೆ ಕಡೆಯಿಂದ ಹಣ ಬರಬೇಕಿದ್ದು, ಸ್ವಲ್ಪ ದಿನ ಕಾಯುವಂತೆ ಆರೋಪಿ ತಿಳಿಸಿದ್ದ. ಹಣ ವಾಪಸ್ ಕೊಡುವಂತೆ ಮಹಿಳೆ ಕೇಳಿದಾಗ ಮತ್ತೆ ಬೆದರಿಕೆ ಹಾಕಿದ್ದ’ ಎಂದು ಮೂಲಗಳು ಹೇಳಿವೆ.

‘ದೂರು ನೀಡಿದರೆ ಕಥೆ ಮುಗಿಸುತ್ತೇನೆ’: ‘ಪೊಲೀಸರಿಗೆ ದೂರು ನೀಡಿದರೆ ನಿನ್ನ ಕಥೆ ಮಗಿಸುತ್ತೇನೆ ಎಂದೂ ಬೆದರಿಸಿದ್ದ. ನಾನು ದೂರು ನೀಡಲು ಮುಂದಾದ ಸಂದರ್ಭದಲ್ಲಿ ಸ್ವರೂಪ್ ತನ್ನ ಸ್ನೇಹಿತ ಶೂಟ್ ಗಿರಿಯನ್ನು ಮಾತುಕತೆಗೆ ಕಳುಹಿಸಿದ್ದ. ₹2 ಲಕ್ಷ ತೆಗೆದುಕೊಂಡು ಸುಮ್ಮನೆ ಇರು ಎಂಬುದಾಗಿ ಶೂಟ್ ಗಿರಿ ಹೇಳಿದ್ದ. ಆತ ಸಹ ನನಗೆ ಬೆದರಿಕೆ ಹಾಕಿದ್ದಾನೆ’ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.