ಬೆಂಗಳೂರು: ರಸ್ತೆ ಸಾರಿಗೆ ನಿಗಮಗಳ ನೌಕರರು ಮಂಗಳವಾರ ಬೆಳಿಗ್ಗೆಯಿಂದಲೇ ಮುಷ್ಕರ ಅರಂಭಿಸಿದ ಪರಿಣಾಮ ಸಾರ್ವಜನಿಕರು ಪ್ರಯಾಣಕ್ಕೆ ಬಸ್ಗಳಿಲ್ಲದೇ ಪರದಾಡಿದರು.

ಕೆಂಪೇಗೌಡ ಬಸ್ ನಿಲ್ದಾಣ ಸೇರಿದಂತೆ ಹಲವು ನಿಲ್ದಾಣಗಳಿಗೆ ಬೆಳಿಗ್ಗೆಯೇ ಬಂದ ಪ್ರಯಾಣಿಕರಿಗೆ ಬಸ್ಗಳು ಲಭ್ಯವಾದವು.

ಮಂತ್ರಾಲಯ, ಹೈದರಾಬಾದ್ ಮೈಸೂರು ಸೇರಿದಂತೆ ಕೆಲ ಭಾಗಗಳ ಬಸ್ಗಳು ಸಂಚಾರ ಅರಂಭಿಸಿದವು. ಆದರೆ, 8 ಗಂಟೆಯ ನಂತರ ಬಸ್ ಸೇವೆಗಳು ಸಂಪೂರ್ಣ ಸ್ಥಗಿತಗೊಂಡವು.

ಕೋರ್ಟ್ ಅದೇಶದಂತೆ ಮುಷ್ಕರ ಮುಂದೂಡಬಹುದು ಎಂದು ನಿರೀಕ್ಷಿಸಿ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ಸಂಕಷ್ಟ ಅನುಭವಿಸಿದರು.

ಮುಂಗಡ ಬುಕ್ಕಿಂಗ್ ಕಾಯ್ದಿರಿಸಿದ್ದ ಪ್ರಯಾಣಿಕರು ಮುಂಗಡ ಕಾಯ್ದಿರಿಸುವಿಕೆ ವಿಭಾಗದ ಸಿಬ್ನಂದಿ ಜತೆ ವಾಗ್ವಾದ ನಡೆದರು. ಬುಕ್ಕಿಂಗ್ ಹಣ ವಾಪಸ್ ಪಡೆಯಲು ಜನ ಸಂದಣಿ ಏರ್ಪಟ್ಟಿತ್ತು.

ನಿಯಮದಂತೆ ಪ್ರತಿ ನಾಲ್ಕು ವರ್ಷಗಳಿಗೆ ಒಮ್ಮೆ ವೇತನ ಪರಿಷ್ಕರಣೆ ಮಾಡಬೇಕು. ಹಿಂದಿನ ಪರಿಷ್ಕರಣೆಯ ನಂತರ ಹೆಚ್ಚಳ ಮಾಡಲಾಗಿದ್ದ 38 ತಿಂಗಳ ವೇತನ ಬಾಕಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಸಾರಿಗೆ ನಿಗಮದ ನೌಕರರ ವಿವಿಧ ಸಂಘಟನೆಗಳು ಮುಷ್ಕರ ನಡೆಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.