‘ಐಎಸ್‌ಡಿ ಕರೆಗಳನ್ನು ಸ್ಥಳೀಯ ಕರೆಯಾಗಿ ಪರಿವರ್ತಿಸುವುದು ಅಪರಾಧ. ಬೇರೆ ದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲಸಿರುವ ಭಾರತೀಯರು, ತಮ್ಮ ಕುಟುಂಬದವರ ಜತೆಗೆ ಮಾತನಾಡಲು ಐಎಸ್‌ಡಿ ಕರೆಗಳನ್ನು ಬಳಸಬೇಕು. ಈ ಕರೆಗಳ ದರ ಸ್ಥಳೀಯ ಕರೆಗಳಿಗಿಂತ ದುಬಾರಿ. ಕರೆಗಳನ್ನು ಪರಿವರ್ತಿಸುವುದರಿಂದ ಸ್ಥಳೀಯ ಕರೆಗಳ ದರದಲ್ಲೇ ಅಂತರರಾಷ್ಟ್ರೀಯ ಕರೆಗಳನ್ನು ಮಾಡಬಹುದು. ಎರಡೂ ದೇಶಗಳಲ್ಲಿ ಒಂದೇ ತಂತ್ರಜ್ಞಾನ ಬಳಸಿದಾಗ ಮಾತ್ರ ಇದು ಸಾಧ್ಯ. ಈ ಉದ್ದೇಶದಿಂದ ಆರೋಪಿಗಳು ದುಬಾರಿ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಬದಲಾಯಿಸುತ್ತಿದ್ದರು. ಕೃತ್ಯಕ್ಕೆ ಸಹಕಾರ ನೀಡಿದ ಸ್ಥಳೀಯರಿಗೆ ಹವಾಲದ ಮೂಲಕ ಹಣ ಸಂದಾಯ ಮಾಡುತ್ತಿದ್ದರು’ ಎಂದೂ ಪೊಲೀಸರು ಹೇಳಿದರು.
ಈ ಸಿಮ್ ಕಾರ್ಡ್‌ಗಳನ್ನು ಬಳಸಿಕೊಂಡು ಸೈಬರ್ ವಂಚನೆ ನಡೆಸಿರುವ ಅನುಮಾನವು ಇದೆ. ತನಿಖೆ ಮುಂದುವರಿದಿದೆ