ಸೋಮವಾರ, ಜನವರಿ 17, 2022
20 °C

ಬೆಂಗಳೂರು: 6,855 ರೂಪಾಯಿ ಆಸೆಗೆ ₹2.7 ಲಕ್ಷ ಕಳೆದುಕೊಂಡ ವೃದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸೈಬರ್‌ ವಂಚಕರ ಆಮಿಷಕ್ಕೆ ಒಳಗಾದ ಯಲಚೇನಹಳ್ಳಿಯ ವೃದ್ಧರೊಬ್ಬರು ₹2.7 ಲಕ್ಷ ಹಣ ಕಳೆದುಕೊಂಡಿದ್ದಾರೆ. ಈ ಸಂಬಂಧ ದಕ್ಷಿಣ ವಿಭಾಗದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘63 ವರ್ಷ ವಯಸ್ಸಿನ ನಾಗೇಶ್‌ ಅವರು ಖಾಸಗಿ ಬ್ಯಾಂಕೊಂದರಿಂದ ಕ್ರೆಡಿಟ್‌ ಕಾರ್ಡ್‌ ‍ಪಡೆದಿದ್ದರು. ‘ನಿಮ್ಮ ಕ್ರೆಡಿಟ್‌ ಕಾರ್ಡ್‌ಗೆ ₹6,855 ಮೊತ್ತದ ಪಾಯಿಂಟ್ಸ್‌ಗಳು ಲಭಿಸಿವೆ. ಆ ಹಣವನ್ನು ಡಿಸೆಂಬರ್‌ 28ರೊಳಗೆ ಪಡೆದುಕೊಳ್ಳಬೇಕು’ ಎಂಬ ಸಂದೇಶವನ್ನು ಸೈಬರ್‌ ಖದೀಮರು 2021ರ ಡಿಸೆಂಬರ್‌ 27 ರಂದು ನಾಗೇಶ್ ಅವರಿಗೆ ಕಳುಹಿಸಿದ್ದರು. ಬಳಿಕ ಲಿಂಕ್‌ವೊಂದನ್ನು ರವಾನಿಸಿ ಅದರಲ್ಲಿ ಕೇಳಲಾದ ಮಾಹಿತಿಗಳನ್ನು ಒದಗಿಸುವಂತೆ ಸೂಚಿಸಿದ್ದರು’ ಎಂದು ಪೊಲೀಸರು ವಿವರಿಸಿದ್ದಾರೆ.

‘ನಾಗೇಶ್‌ ಅವರು ಸೈಬರ್‌ ವಂಚಕರ ಮಾತುಗಳನ್ನು ನಂಬಿ ಅವರು ಕಳುಹಿಸಿದ್ದ ಲಿಂಕ್‌ ಕ್ಲಿಕ್ಕಿಸಿದ್ದರು. ಕೂಡಲೇ ವಂಚಕರು ಅವರ ಬ್ಯಾಂಕ್‌ ಖಾತೆಯಿಂದ ಹಂತ ಹಂತವಾಗಿ ಹಣ ಡ್ರಾ ಮಾಡಿಕೊಂಡಿದ್ದರು’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು