15ಕ್ಕೆ ತಾಳಮದ್ದಳೆ

ಬೆಂಗರೂರು: ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಇದೇ 15ರಂದು ಮಧ್ಯಾಹ್ನ 2 ಗಂಟೆಗೆ ‘ಗಾಂಧಾರಿ ಶಾಪ’ ಮತ್ತು ‘ವಾಲಿ ವಧೆ’ ತಾಳಮದ್ದಳೆ ಹಮ್ಮಿಕೊಳ್ಳಲಾಗಿದೆ.

ಹಿಮ್ಮೇಳದಲ್ಲಿ ಶುರೇಶ ಶೆಟ್ಟಿ ಶಂಕರನಾರಾಯಣ, ಸುಬ್ರಾಯ ಹೆಬ್ಬಾರ್, ಶ್ರೀನಿವಾಸ ಪ್ರಭು, ಅಕ್ಷಯ್ ಆಚಾರ್ಯ, ಅಜಿತ್ ಆಚಾರ್ಯ್ ಹಾಗೂ ನಾಗರಾಜ ಯಡಮೊಗೆ ಪಾಲ್ಗೊಳ್ಳುತ್ತಾರೆ. ಮುಮ್ಮೇಳದಲ್ಲಿ ವಾಸುದೇವ ರಂಗಾಭಟ್, ಗಣಪತಿ ಭಟ್ ಸಂಕದಗುಂಡಿ, ಜಬ್ಬಾರ್ ಸಮೊ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಸುನಿಲ್ ಕುಮಾರ್ ಹೊಲಾಡು ಅವರು ಭಾಗವಹಿಸುತ್ತಾರೆ.

ವಿವರಕ್ಕೆ: 9741474255 ಅಥವಾ 7022420400

ವ್ಯಂಗ್ಯಚಿತ್ರ ಪ್ರದರ್ಶನ

ಬೆಂಗಳೂರು: ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯು ಎಂ.ಜಿ ರಸ್ತೆಯ ಮಿಡ್ ಫೋರ್ಡ್ ಹೌಸ್ನ ತನ್ನ ಗ್ಯಾಲರಿಯಲ್ಲಿ ಇದೇ 15ರಿಂದ 30ರವರೆಗೆ ವ್ಯಂಗ್ಯಚಿತ್ರಕಾರ ರವಿಕಾಂತ ನಂದುಲಾ ಅವರ ಆಯ್ದ ವ್ಯಂಗ್ಯಚಿತ್ರಗಳ ಪ್ರದರ್ಶನ ಹಮ್ಮಿಕೊಂಡಿದೆ.

ಅವರು ಹೆಚ್ಚಾಗಿ ತಂತ್ರಜ್ಞಾನ, ಪರಿಸರ, ವ್ಯಾಪಾರ, ವ್ಯವಹಾರ, ಜೀವವೈವಿಧ್ಯ ವಿಷಯಗಳ ಕುರಿತು ವ್ಯಂಗ್ಯಚಿತ್ರ ಬರೆದಿದ್ದಾರೆ. ಈ ವ್ಯಂಗ್ಯಚಿತ್ರ ಪ್ರದರ್ಶನವು ಬೆಳಿಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದೆ. ಎಲ್ಲರಿಗೂ ಮುಕ್ತ ಪ್ರವೇಶ ಇರಲಿದೆ.

ವಾರ್ಷಿಕ ಸಂಗೀತೋತ್ಸವ

ಬೆಂಗಳೂರು: ಬೆಂಗಳೂರು ಗಾಯನ ಸಮಾಜವು ಇದೇ 16ರಿಂದ 23ರವರೆಗೆ ಕೆ.ಆರ್. ರಸ್ತೆಯಲ್ಲಿರುವ ತನ್ನ ಕೇಂದ್ರದಲ್ಲಿ 55ನೇ ವಾರ್ಷಿಕ ಸಂಗೀತೋತ್ಸವ ಹಮ್ಮಿಕೊಂಡಿದೆ.

16ರಂದು ಬೆಳಿಗ್ಗೆ 9.30ಕ್ಕೆ ಉದ್ಘಾಟನೆಯಾಗಲಿದ್ದು, ಸಂಜೆ 6 ಗಂಟೆಗೆ ಸಂಗೀತ ಕಛೇರಿ ನಡೆಯಲಿದೆ. ಅಮೃತ ಮುರಳಿ, ಎಚ್.ಎಂ. ಸ್ಮಿತಾ, ಬಿ.ಎಸ್. ಪ್ರಶಾಂತ್ ಮತ್ತು ಬಿ. ರಾಜಶೇಖರ್ ಭಾಗವಹಿಸುತ್ತಾರೆ. 17ರಂದು ಸಂಜೆ 6 ಗಂಟೆಗೆ ನಡೆಯುವ ಸಂಗೀತ ಕಛೇರಿಯಲ್ಲಿ ಪದ್ಮಾ ಗುರುದತ್ತ, ನಳಿನಾ ಮೋಹನ್, ಎಚ್.ಎಸ್. ಸುಧೀಂದ್ರ, ಎಸ್.ಎನ್. ನಾರಾಯಣಮೂರ್ತಿ ಪಾಲ್ಗೊಳ್ಳುತ್ತಾರೆ.

ಸಂಗೀತ ಮೇಳ

ಬೆಂಗಳೂರು: ವಿ.ಟಿ.ಎಂಟರ್ಟೈನರ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಇದೇ 15ರಂದು ಸಂಜೆ 6 ಗಂಟೆಗೆ ಚೌಡಯ್ಯ ಸ್ಮಾರಕ ಭವನದಲ್ಲಿ ‘ಆಫ್ ಬೀಟ್’ ಸಂಗೀತ ಮೇಳ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದಿಂದ ಬರುವ ಹಣವನ್ನು ಅಂಗವಿಕಲರ ಕಲ್ಯಾಣಕ್ಕೆ ಬಳಸಲಾಗುತ್ತದೆ. ಅಂಗವಿಕಲರ ವಸತಿ ಗೃಹವಾದ ವಿಶ್ವಶಾಂತಿನಿಕೇತನ, ರೋಟರಿ ಕಬ್ಬನ್ ಪಾರ್ಕ್ ಟ್ರಸ್ಟ್ನ ಆನಂದಮಯ ಹೋಮ್ ಫಾರ್ ಸೀನಿಯರ್ ಸಿಟಿಜನ್ಸ್ ಯೋಜನೆಗೆ ಬಳಸಲಾಗುತ್ತದೆ.

ಕಲಾವಿದರಾದ ಶೃತಿ ಭಿಡೆ, ಅಭಿಷೇಕ್ ರಾವ್, ಸಮನ್ವಿತಾ ಶರ್ಮಾ, ಗೋವಿಂದ ಕುರನೂಲ್, ಮಾಳವಿಕಾ ನಿರಂಜನ್, ನರಸಿಂಹನ್ ಕಣ್ಣನ್, ದಿವ್ಯಾ ರಾಘವನ್, ಸೌಮ್ಯಾ, ಸುಬ್ರತ್ ಸಾಹೂ, ಜ್ಯೋತಿ ಕಂಜೂರು ಭಾಗವಹಿಸುತ್ತಾರೆ. ಟಿಕೆಟ್ಗಳು ಬುಕ್ ಮೈ ಶೋದಲ್ಲಿ ಲಭ್ಯವಿವೆ. ದಾನಿಗಳ ಪಾಸ್ಗೆ ಮೊ.ಸಂಖ್ಯೆ 9886019151 ಅಥವಾ 9845049796

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.